

ಬೆಳಗಾವಿ: ಔಷಧ ಅನ್ವೇಷಣೆ ಪ್ರಕ್ರಿಯೆಯಲ್ಲಿ ಪೂರ್ವ ವೈದ್ಯಕೀಯ ಅಧ್ಯಯನಗಳು ಅಮೂಲ್ಯ ಪಾತ್ರ ವಹಿಸುತ್ತವೆ ಎಂದು ಕೆಎಲ್‌ಇ ಔಷಧಶಾಸ ವಿಭಾಗದ ಮುಖ್ಯಸ್ಥ ಡಾ.ಪಿ.ಎ.ಪಾಟೀಲ ಹೇಳಿದರು.
ನಗರದ ಕೆಎಲ್ಇ ಕಾಲೇಜ್ ಆ್ ಪಾರ್ಮಸಿಯ ಔಷಧಶಾಸ ವಿಭಾಗವು ಪ್ರಿಕ್ಲಿನಿಕಲ್ ಪಾರ್ಮ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವೀನ ಮಾದರಿಗಳು, ತಂತ್ರಗಳು ಮತ್ತು ಪ್ರವೃತ್ತಿಗಳು ಎಂಬ ವಿಷಯದ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಪ್ರಾಯೋಗಿಕ ಔಷಧಶಾಸದಲ್ಲಿ ನಿರಂತರ ನಾವೀನ್ಯತೆ ಅಗತ್ಯವಿದೆ. ಪೂರ್ವ ವೈದ್ಯಕೀಯ ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ದಕ್ಷತೆ ಹೆಚ್ಚಿಸುವ ನವೀನ ಮಾದರಿಗಳು ಮತ್ತು ಅತ್ಯಾಧುನಿಕ ತಂತ್ರ ಅಳವಡಿಸಿಕೊಳ್ಳುವಂತೆ ಸಂಶೋಧಕರು, ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಂಶುಪಾಲ ಡಾ. ಸುನೀಲ ಎಸ್.ಜಲಾಲಪುರೆ ಮಾತನಾಡಿ, ಪ್ರಿಕ್ಲಿನಿಕಲ್ ಅಧ್ಯಯನಗಳ ಗುಣಮಟ್ಟ ಮತ್ತು ಪ್ರಸ್ತುತತೆ ಹೆಚ್ಚಿಸುವಲ್ಲಿ ನಾವೀನ್ಯ ಮತ್ತು ಸಂಶೋಧನೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಔಷಧದ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮುನ್ಸೂಚನೆಯನ್ನು ಸುಧಾರಿಸಲು ಸುಧಾರಿತ ಪ್ರಾಯೋಗಿಕ ಮಾದರಿ ಮತ್ತು ಹೊಸ ತಂತ್ರಜ್ಞಾನ ಸಂಯೋಜಿಸುವ ಅಗತ್ಯವಿದೆ ಎಂದರು.
ಡಾ. ವಿ.ಎಸ್. ಮಾಸ್ತಿಹೋಳಿಮಠ, ಡಾ. ನ್ಮಯ್ ಪಾತ್ರ, ಡಾ.ಎನ್.ಎ. ಖತೀಬ, ಡಾ. ಸಂಜಯ ಉಗಾರೆ, ಡಾ. ನಮಿತ ಕುಡತಾರ್ಕರ ಇತರರಿದ್ದರು.