

ಚಿಕ್ಕಬಳ್ಳಾಪುರ: ಎದುರಾಗುವ ವಿಪತ್ತುಗಳನ್ನು ಸಮರ್ಥವಾಗಿ ನಿಭಾಯಿಸಿ, ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವೈದ್ಯಾಧಿಕಾರಿ ಡಾ ಎಸ್.ಎಂ ಶೀಲಾ ಸಲಹೆ ನೀಡಿದರು.
ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಕೈಗೊಂಡಿದ್ದ ಬರ ನಿರ್ವಹಣೆ ಕುರಿತು ಅಣಕು ಪ್ರದರ್ಶನವನ್ನುದ್ದೇಶಿಸಿ ಮಾತನಾಡಿದರು.
ವಿಪತ್ತುಗಳು ಅನಿರೀತವಾಗಿ ಎದುರಾಗಬಹುದು. ಇವುಗಳನ್ನು ಎದುರಿಸುವ ತಿಳಿವಳಿಕೆ, ಶಕ್ತಿ ಇಲ್ಲದಿದ್ದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
*ಪ್ರಾಯೋಗಿಕ ಪ್ರದರ್ಶನ
ಪರಿಸರದಲ್ಲಿ ಎದುರಾಗುವ ವಿಪತ್ತುಗಳು, ಅಪಾಯಗಳನ್ನು ನಿಯಂತ್ರಿಸುವುದರ ಬಗ್ಗೆ ಆರೋಗ್ಯ, ಪೊಲೀಸ್, ಅರಣ್ಯ. ಎನ್‌ಡಿಆರ್‌ಎ ಪಡೆಯ ತಜ್ಞರು ಅಣಕು ಪ್ರದರ್ಶನದ ಮೂಲಕ ಅರಿವು ಮೂಡಿಸಿದರು.