ವಿದ್ಯಾರ್ಥಿಗಳಿಗೆ ವ್ಯವಹಾರದ ಪ್ರಾಯೋಗಿಕ ಮಾಹಿತಿ

STUDENT
Published on

ನರಗುಂದ: ಪಟ್ಟಣದ ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಸಿ.ವಿ. ಜಗಲಿ ಹಾಗೂ ಸಿ.ಪಿ. ನೀಲಗುಂದ ಅವರು ಎಪಿಎಂಸಿ ಹಾಗೂ ಎಸ್‌ಬಿಐ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ ಅವರು ಎಪಿಎಂಸಿಯ ಸ್ಥಾಪನೆ, ಉದ್ದೇಶ, ಕಾರ್ಯಗಳು, ಮಾರುಕಟ್ಟೆಯ ಪ್ರಕ್ರಿಯೆಗಳು, ಪ್ರಯೋಜನಗಳನ್ನು ವಿವರಿಸಿದರು. ಎಪಿಎಂಸಿ ಆವರಣದಲ್ಲಿರುವ ವ್ಯಾಪಾರ ಪ್ರಕ್ರಿಯೆಗಳನ್ನು ತಿಳಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಂತರ ವಿದ್ಯಾರ್ಥಿಗಳು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮುಖ್ಯ ಶಾಖೆಗೆ ತೆರಳಿ ಬ್ಯಾಂಕ್ ವ್ಯವಸ್ಥಾಪಕ ವಿಜಯಕೃಷ್ಣ ಎಸ್.ಎನ್ ಅವರ ಮೂಲಕ ಬ್ಯಾಂಕ್‌ನ ವಿವಿಧ ಕಾರ್ಯಚಟುವಟಿಕೆಯ ಮಾಹಿತಿ ಪಡೆದರು.

ಉಪನ್ಯಾಸಕರಾದ ಎಚ್.ವೈ. ಜೋತೆಣ್ಣವರ, ಎನ್.ವಿ. ಚಂದ್ರತ್ನವರ, ವೈ.ಎಸ್.ಚಾಕಲಬ್ಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net