ಆಧುನಿಕತೆಯ ಪರಿಣಾಮ ಕಲಾವಿದರು ತೆರೆಮರೆ

Prabhulingeshwara Jatra Festival,
ಚಿಮ್ಮಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಮಾತನಾಡಿದರು. ಶ್ರೀಜನಾರ್ಧನ ಮಹಾರಾಜರು, ಮುಖಂಡರಾದ ರಾಮಣ್ಣ ಮುಗಳಖೋಡ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ, ಶಂಕರ ಬಟಕುರ್ಕಿ ಇದ್ದರು.
Published on

ಚಿಮ್ಮಡ: ಆದುನಿಕತೆಯ ಪರೀಣಾಮ ಇಂದು ಗ್ರಾಮೀಣ ಭಾಗಗಳಲ್ಲಿ ಮನೆಮಾತಾಗಿದ್ದ ಕಲೆ ಹಾಗೂ ಕಲಾವಿದರು ತೆರೆಮರೆಯಾಗುತಿದ್ದು ಅವರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.

ಗ್ರಾಮದ ಪ್ರಭುಲಿಂಗೇಶ್ವೆರ ಜಾತ್ರಾ ಮಹೋತ್ಸವ, ರಥೋತ್ಸವದ ಅಂಗವಾಗಿ ಪ್ರಭುಲಿಂಗೇಶ್ವರ ಕಲೆ ಮತ್ತು ಸಾಂಸ್ಕ್ರತಿಕ ನಾಟ್ಯ ಸಂಘದ ಕಲಾವಿದರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೇವರಗಿಯ ಗುರು ಪಂಚಾಕ್ಷರಿ ಗವಾಯಿ ನಾಟ್ಯ ಸಂಘದ ಕಲಾವಿದರು ಅಭಿನಯಿಸಿದ ಶೆರೆ ಅಂಗಡಿ ಸಂಗವ್ವ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.

ನಾಟಕಗಳಿಗೆ ಸಂಗೀತ ಕಲಾವಿದರೇ ಜೀವಾಳವಾಗಿದ್ದು, ನಾಟಕದ ಪ್ರತಿಯೊಂದು ಸನ್ನಿವೇಶಗಳಿಗೆ ತಕ್ಕಂತೆ ಸುಶ್ರಾವ್ಯವಾಗಿ ಹಾಡಿ, ಸಂಧರ್ಬಗಳಿಗನುಸಾರ ಸಂಗೀತದ ಮೂಲಕ ಮನಸನ್ನು ಮುದಗೊಳಿಸುವ ಕಲಾವಿದರ ಸಂಖ್ಯೆ ಕ್ಷೀಣಿಸುತಿದೆ. ಗ್ರಾಮೀಣ ಭಾಗಗಳಲ್ಲಿ ಮಾತ್ರ ಜೀವಂತಿಕೆ ಇರುವ ನಾಟಕ, ಕಲೆ, ಹಾಗೂ ಕಲಾವಿದರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕಾಗಿದೆ ಎಂದರು.

ರಘುನಾಥ ಪ್ರೀಯ ಸಾಧು ಮಹಾರಾಜರ ಮಠದ ಶ್ರೀಜನಾರ್ಧನ ಮಹಾರಾಜರು ಮಾತನಾಡಿ, ಗ್ರಾಮೀಣ ಕಲಾವಿದರು ಸತತ ಅಭಿನಯದಿಂದಾಗಿ ವೃತ್ತಿ ರಂಗಭೂಮಿ ಕಲಾವಿದರಿಗಿಂತಲೂ ಅಚ್ಚುಕಟ್ಟುತನದ ಅಭಿನಯ ಕಲೆಯ ಜೀವಂತಿಕೆ ತೋರಿಸುತ್ತದೆ ಎಂದರು.

ಮುಖಂಡರಾದ ರಾಮಣ್ಣ ಮುಗಳಖೋಡ, ಆರ್.ಎಂ. ಬಗನಾಳ, ಅಣ್ಣಪ್ಪಗೌಡ ಪಾಟೀಲ, ರಾಚಯ್ಯ ಮಠಪತಿ ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಅಶೋಕ ಧಡೂತಿ, ಬಸವರಾಜ ಕುಂಚನೂರ, ಮಲ್ಲಿಕಾರ್ಜುನ ಬಳಗಾರ, ಮಹಾಂತೇಶ ಜಾಲಿಕಟ್ಟಿ ಇದ್ದರು. ಅವ್ವನಪ್ಪ ಮುಗಳಖೋಡ ಸ್ವಾಗತಿಸಿದರು. ಪ್ರಕಾಶ ಪೂಜಾರಿ ನಿರೂಪಿಸಿದರು. ಕಾಳು ಬಡಿಗೆರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net