ಪ್ರಭು ಶ್ರೀರಾಮಚಂದ್ರ ಎಲ್ಲರಿಗೂ ಮಾದರಿ

26bkl1SHREE RAM
Published on

ಭಟ್ಕಳ: ನಿಷ್ಪಕ್ಷಪಾತ ಆಡಳಿತ, ಧರ್ಮದ ರಕ್ಷಣೆ, ಅಪರಾಧಿಗಳಿಗೆ ಶಿಕ್ಷೆ ಇದೆಲ್ಲವನ್ನೂ ಪ್ರಭು ಶ್ರೀರಾಮ ಅಂದಿನ ತಮ್ಮ ಆಡಳಿತಾವಧಿಯಲ್ಲೇ ರೂಢಿಸಿಕೊಂಡಿದ್ದ ಅವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದು ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪನ್ಯಾಸಕ ವಿದ್ವಾನ ಶ್ರೀಹರಿ ಆಚಾರ್ಯ ಉಳ್ವೇಕರ ಹೇಳಿದರು.

ಪಟ್ಟಣದ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮೂಲರಾಮಾಯಣ ಪ್ರವಚನದ ಮಂಗಲೋತ್ಸವದಲ್ಲಿ ಅವರು ಮಾತನಾಡಿದರು. ಅಂದು ಪ್ರಭು ಶ್ರೀರಾಮ ಆಡಳಿತಾವಧಿಯಲ್ಲಿ ಎಂದು ಅಪವಿತ್ರ ಮೈತ್ರಿ ಮಾಡಿಕೊಂಡಿರಲಿಲ್ಲ. ಶ್ರೀರಾಮನ ಪತ್ನಿ ದೇವಿ ಸೀತಾ ಮಾತೆಯನ್ನು ರಾವಣ ಅಪಹರಿಸಿದ್ದ. ಅಂದು ಶ್ರೀರಾಮನು ಬಲಶಾಲಿಯಾದ ವಾಲಿಯ ನೆರವು ಪಡೆಯದೆ ಧರ್ವತ್ಮನಾದ ಸುಗ್ರೀವನ ನೆರವು ಪಡೆದಿದ್ದ. ವಾಲಿ ಸುಗ್ರೀವರ ಯುದ್ಧ ನಡೆದಾಗ ಶ್ರೀರಾಮನು ವಾಲಿಯನ್ನು ತನ್ನ ಬಾಣದಿಂದ ನೆಲಕ್ಕುರಿಳಿಸಿದ್ದ. ಬಳಿಕ ಎದುರಿಗೆ ಬಂದ ಶ್ರೀರಾಮ ಹಾಗೂ ವಾಲಿಯ ನಡುವಿನ ಸಂಭಾಷಣೆಯ ನಿದರ್ಶನ ನೀಡಿ ವಿದ್ವಾನ ಶ್ರೀಹರಿ ಆಚಾರ್ಯ ರೋಚಕವಾಗಿ ವಿವರಿಸಿದರು.

ಅಪರಾಧಿಗಳಿಗೆ ಶಿಕ್ಷೆ ನೀಡುವ ವಿಷಯದಲ್ಲಿ ಯಾವುದೇ ನಿಯಮಗಳು ಇರುವದಿಲ್ಲ. ಉಗ್ರಗಾಮಿಗಳಂತಹ ರಾಷ್ಟ್ರದ್ರೋಹಿಗಳಿಗೆ ಶಿಕ್ಷೆ ನೀಡುವುದೇ ಮುಖ್ಯ ಹೊರತು ಅಲ್ಲಿ ಯಾವುದೇ ನಿಯಮಗಳು ಇರುವುದಿಲ್ಲ. ಯುದ್ಧ ನಡೆಯುವ ಸಂದರ್ಭದಲ್ಲಿ ಅದರದೇ ಆದ ನಿಯಮಗಳಿದ್ದು, ಅದನ್ನು ಪಾಲಿಸಲಾಗುತ್ತಿತ್ತು ಎಂದರು.

ಬುಧವಾರ ಆರಂಭಗೊಂಡಿದ್ದ ಪ್ರವಚನ ಕಾರ್ಯಕ್ರಮ ಶನಿವಾರ ಮಂಗಲೋತ್ಸವಗೊಂಡಿತು. ಬಳಿಕ ಶ್ರೀ ಹನುಮಂತ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಹಸ್ರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು. ಆಡಳಿತ ಮಂಡಳಿಯ ಮಾಜಿ ಸದಸ್ಯರಾದ ಶ್ರೀಧರ ಮೊಗೇರ, ಶಿವರಾಮ ನಾಯ್ಕ ನಾಗೇಶ ಪೈ, ಗಣಪತಿ ಆಚಾರ್ಯ ದೇವಸ್ಥಾನದ ಮ್ಯಾನೇಜರ್ ಕೃಷ್ಣಾ ಮಹಾಲೆ, ಶಂಕರ ಶೆಟ್ಟಿ, ಸುರೇಂದ್ರ ಭಟ್ಕಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net