ತಾಯಿ ಮಗಳಂತಿರಬೇಕು ಅತ್ತೆ-ಸೊಸೆ: ಕಂಪ್ಲಿಯ ಕಲ್ಮಠದ ಪ್ರಭು ದೇವರ ಸ್ವಾಮೀಜಿ

21KKNR-01
Published on

ಕುಕನೂರು: ಮಕ್ಕಳ ಭವಿಷ್ಯ ಉಜ್ವಲಗೊಳಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಕಂಪ್ಲಿಯ ಕಲ್ಮಠದ ಶ್ರೀ ಪ್ರಭು ದೇವರ ಸ್ವಾಮೀಜಿ ಹೇಳಿದರು.


ವೀರಾಪುರ ಗ್ರಾಮದಲ್ಲಿ ಶ್ರೀಶಿವಬಸವೇಶ್ವರ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಂಗಳವಾರ ಮಾತನಾಡಿದರು.

ಕೈಲಾಸ ಎಲ್ಲೂ ಇಲ್ಲ, ನಮ್ಮ ನಡುವೆಯೇ ಇದೆ. ವಿವಾಹವಾಗುವ ನವಜೋಡಿಗಳು ಪರಸ್ಪರ ಅರಿತು ಜೀವನ ನಡೆಸಿದರೆ ಅಲ್ಲಿಯೇ ಕೈಲಾಸವಿದೆ. ಅತ್ತೆ-ಮಾವನನ್ನು ತಂದೆ-ತಾಯಿಯಂತೆ ನೋಡಿಕೊಳ್ಳಬೇಕು. ಅದೇ ರೀತಿ ಅತ್ತೆ ಕೂಡ ಸೊಸೆಯನ್ನು ಮಗಳಂತೆ ನೋಡಿಕೊಳ್ಳಬೇಕು. ಅಂದಾಗ ನಿಮ್ಮ ಮನೆತನ ಬೆಳೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ರೈತಾಪಿ ಕುಟುಂಬಕ್ಕೆ ಕನ್ಯೆ ದೊರೆಯುತ್ತಿಲ್ಲ. ರೈತರು ನಮ್ಮ ಜೀವನಾಡಿ, ರೈತ ಬೆಳೆದರೆ ನಾವು ಹಿಡಿ ಅಕ್ಕಿ, ಜೋಳ ಕಾಣಲು ಸಾಧ್ಯ ಎಂದರು.


ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣನವರ, ಬೆದವಟ್ಟಿಯ ಶ್ರೀ ಶಿವಸಂಗಮೇಶ್ವರ ಸ್ವಾಮೀಜಿ, ಪದ್ಮಾಕ್ಷರಯ್ಯ ಸ್ವಾಮಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಶರಣಪ್ಪಗೌಡ ಮಾಲಿಪಾಟೀಲ್, ಪ್ರಮುಖರಾದ ಬಸಲಿಂಗಯ್ಯ ಹಿರೇಮಠ, ಕಾಶಯ್ಯ ಸೊಪ್ಪಿಮಠ, ಸಚಿನ್ ಆಚಾರ್, ಈರಣ್ಣ ಬ್ಯಾಳಿ, ಕಳಕನಗೌಡ ಕಲ್ಲೂರು, ಕೊಟ್ರಪ್ಪ ಮುತ್ತಾಳ ಇತರರಿದ್ದರು. 13 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net