ಪ್ರಭಾರ ಆರ್‌ಐ ಮೇಲಿನ ಹಲ್ಲೆಗೆ ಆಕ್ರೋಶ: ಬಳ್ಳಾರಿ ಡಿಸಿ ಕಚೇರಿ ಮುಂದೆ ಸರ್ಕಾರಿ ನೌಕರರ ಸಂಘ ಧರಣಿ

021221 Ballari Govt Employees Protest
ಬಳ್ಳಾರಿ ಡಿಸಿ ಕಚೇರಿ ಎದುರು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಧರಣಿ ನಡೆಸಿದರು.
Published on

ಬಳ್ಳಾರಿ: ಪ್ರಭಾರ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಹಾಗೂ ಅವರ ಕುಟುಂಬದ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್ ಮಾತನಾಡಿ, ವಿಎ ಆಗಿದ್ದ ವೆಂಕಟಸ್ವಾಮಿಗೆ ಕಂದಾಯ ನಿರೀಕ್ಷಕ ಪ್ರಭಾರ ವಹಿಸಲಾಗಿದೆ. ತಾಲೂಕಿನ ತೋಳಮಾಮಿಡಿ ಗ್ರಾಮದಲ್ಲಿ ಬುಧವಾರ ಅಕ್ರಮ ಮರಳು ತಡೆಯಲು ತೆರಳಿದ್ದರು. ಮರಳು ಸಾಗಿಸುತ್ತಿದ್ದ ಟ್ರಾೃಕ್ಟರ್ ಜಪ್ತಿ ವೇಳೆ ಗಲಾಟೆ ನಡೆದಿದೆ. ಸಂಜೆ 20ಕ್ಕೂ ಹೆಚ್ಚು ಜನರು ನಗರದಲ್ಲಿರುವ ವೆಂಕಟಸ್ವಾಮಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಅವರ ಮೇಲೆ ಮತ್ತು ಪತ್ನಿ, ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಭಾರ ಕಂದಾಯ ನಿರೀಕ್ಷಕ ವೆಂಕಟಸ್ವಾಮಿ ಮತ್ತು ಅವರ ಪತ್ನಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಲ್ಲೆಗೈದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net