ಡಾ.ಎಂ.ಪ್ರಭಾಕರ ಜೋಶಿಗೆ ‘ಆನಂದ ಬಳಗ ಪ್ರಶಸ್ತಿ’

mng--1 march prabakara joshi
ಪ್ರಭಾಕರ ಜೋಶಿ
Published on

ಮಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಸಾಂಸ್ಕೃತಿಕ ಮತ್ತು ಸಮಾಜ ಸೇವಾ ಸಂಸ್ಥೆ ಆನಂದ ಬಳಗ ನೀಡುವ ‘ಆನಂದ ಸಮಾಜ ಭೂಷಣ’ ಪ್ರಶಸ್ತಿಯನ್ನು ಹಿರಿಯ ಕಲಾವಿದ, ಸಾಹಿತಿ ಡಾ.ಎಂ.ಪ್ರಭಾಕರ ಜೋಶಿ ಮತ್ತು ಹಿರಿಯ ಉದ್ಯಮಿ, ಸಮಾಜ ಸೇವಕ ಎಂ.ಭಾಸ್ಕರ ರಾವ್ ಅವರಿಗೆ ನೀಡಲಾಗುವುದು.

ಆನಂದ ಬಳಗವು ಬೆಂಗಳೂರಿನ ಕರಾವಳಿ ಕನ್ನಡಿಗರ ಪ್ರಸಿದ್ಧ ಸೇವಾ ಸಂಸ್ಥೆಯಾಗಿದ್ದು, ಕಳೆದ 34 ವರ್ಷಗಳಲ್ಲಿ ಪ್ರತಿಭಾ ಪುರಸ್ಕಾರ, ವಸಂತೋತ್ಸವ, ವ್ಯಾಸಂಗ ವೇತನ, ಸಾಮಾಜಿಕ ನೆರವು, ಸಾಂಸ್ಕೃತಿಕ ಸಮಾರಂಭಗಳ ಸಹಿತ ಒಂದು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿದ್ದು, ಸುಮಾರು 5 ಕೊಟಿ ರೂಪಾಯಿಗಳನ್ನು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಮಾ.5ರಂದು ಸಂಜೆ ಬೆಂಗಳೂರಿನ ಹೋಟೆಲ್ ವುಡ್‌ಲ್ಯಾಂಡ್ಸ್ ಸಭಾಭವನದಲ್ಲಿ ಜರುಗಲಿರುವುದು. ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಉಪಸ್ಥಿತರಿರುವರು. ಸಂಸ್ಥೆ ಅಧ್ಯಕ್ಷ ಬಾ.ರಾಮಚಂದ್ರ ಅಧ್ಯಕ್ಷತೆ ವಹಿಸುವರು. ನೃತ್ಯ ವಿದುಷಿ ಸಂಧ್ಯಾ ಕೇಶವ ರಾವ್ ಬಳಗದಿಂದ ‘ನೃತ್ಯ ಸಂಧ್ಯಾ’ ಕಾರ್ಯಕ್ರಮ ಜರಗಲಿದ್ದು ಬಳಗವನ್ನು ಮತ್ತು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net