

ಹುಬ್ಬಳ್ಳಿ: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ)ಯ ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪ್ರಯಾಸ್-ಕಾರ್ಯಕ್ರಮದಲ್ಲಿ ನಿವೃತ್ತರಿಗೆ ಪಿಂಚಣಿ ಪಾವತಿ ಆದೇಶ ವಿತರಿಸಲಾಯಿತು.
ಜುಲೈ ತಿಂಗಳಲ್ಲಿ ನಿವೃತ್ತರಾದ 28 ಜನ ಉದ್ಯೋಗಿಗಳಲ್ಲಿ ಇಂದಿನ ಕಾರ್ಯಕ್ರಮದಲ್ಲಿ ಹಾಜರಿದ್ದ 22 ಜನ ನಿವೃತ್ತರು ಸಹಾಯಕ ಭವಿಷ್ಯ ನಿಧಿ ಆಯುಕ್ತ ಬಿಜಯಪ್ರಸಾದ ಅವರಿಂದ ಪಿಂಚಣಿ ಪಾವತಿ ಆದೇಶ ಸ್ವೀಕರಿಸಿದರು.
ಲೆಕ್ಕಾಧಿಕಾರಿ ಬಿ. ಪಣಿ ಸಿನ್ಹಾ, ಸೆಕ್ಷನ್ ಸೂಪರವೈಜರ್ ಕೆ. ಯುವರಾಜ, ಸಿಬ್ಬಂದಿ ಇದ್ದರು.