4 ವರ್ಷದಲ್ಲಿ ಅತಿ ಹೆಚ್ಚು ಪಿಪಿಒ ವಿತರಣೆ, ನಿವೃತ್ತಿ ದಿನವೇ 124 ಜನರಿಗೆ ಪಿಂಚಣಿ ಪತ್ರ

IMG-20240629-WA0006-2.jpg
Published on

ಹುಬ್ಬಳ್ಳಿ: ಇಲ್ಲಿಯ ನವನಗರದಲ್ಲಿರುವ ಪ್ರಾದೇಶಿಕ ಭವಿಷ್ಯನಿಧಿ ಕಚೇರಿಯಲ್ಲಿ ನಿವೃತ್ತಿ ದಿನವೇ ಪಿಂಚಣಿ ಪ್ರಮಾಣ ಪತ್ರ ನೀಡುವ "ಪ್ರಯಾಸ' ಕಾರ್ಯಕ್ರಮವನ್ನು ಶುಕ್ರವಾರ ಏರ್ಪಡಿಸಲಾಗಿತ್ತು.

ಕಳೆದ ನಾಲ್ಕು ವರ್ಷದಿಂದ ಪ್ರತಿ ತಿಂಗಳು ಪ್ರಯಾಸ ಆಯೋಜನೆ ಮಾಡಲಾಗುತ್ತಿದ್ದು, ಇದೇ ಮೊದಲ ಬಾರಿ ಅತ್ಯಂತ ಹೆಚ್ಚು ಅಂದರೆ ಜೂನ್ ತಿಂಗಳಲ್ಲಿ 124 ಪಿಂಚಣಿ ಪ್ರಮಾಣ ಪತ್ರ (ಪಿಪಿಒ) ವಿತರಣೆ ಮಾಡಿ ದಾಖಲೆ ಬರೆಯಲಾಗಿದೆ.

ಕಚೇರಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಾಜರಾಗಿದ್ದ ಸುಮಾರು 97 ಜನರಿಗೆ ಪಿಪಿಒ ವಿತರಣೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ಪಿಎಫ್ ಆಯುಕ್ತ ರಾಮಕೇಶ ಮೀನಾ ಅವರು ಮಾತನಾಡಿ, ಪ್ರಯಾಸ ಯೋಜನೆಯ ಪ್ರಯೋಜನಗಳನ್ನು ವಿವರಿಸಿದರು. ಯಾವುದೇ ಅಡೆತಡೆ ಇಲ್ಲದೇ ಪಿಂಚಣಿ ಹಂಚಿಕೆಯಾಗಲು ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಸುವುದು ಅಗತ್ಯವಾಗಿದೆ. ಈ ಬಗ್ಗೆ ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಪ್ರಾದೇಶಿಕ ಪಿಎಫ್ ಆಯುಕ್ತ-2 ರಮೀಜ ಮೆಹರ್, ಅಕೌಂಟ್ಸ್ ಆಫೀಸರ್ ಜೆ.ಎ. ಮಂಜುನಾಥ, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ ಇತರರು ಉಪಸ್ಥಿತರಿದ್ದರು. ಪಿಂಚಣಿದಾರರು, ಕಂಪನಿಗಳ ಪ್ರತಿನಿಧಿಗಳು, ಉದ್ಯಮದಾರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net