

ಹುಬ್ಬಳ್ಳಿ: ನವನಗರದ ಇಪಿಎಫ್ಒ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಯಾಸ ಕಾರ್ಯಕ್ರಮದಲ್ಲಿ ನಿವೃತ್ತಿ ದಿನವೇ ನೀಡಲಾಗುವ ಪಿಂಚಣಿ ಪಾವತಿ ಆದೇಶ (ಪಿಪಿಒ) ಪತ್ರಗಳನ್ನು 13 ಜನರಿಗೆ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಹಾಜರಾಗಿದ್ದ ನಾಲ್ವರಿಗೆ ಸಹಾಯಕ ಪಿಎಫ್ ಆಯುಕ್ತ ಬಿಜಯ ಪ್ರಸಾದ ಪಿಪಿಒ ವಿತರಿಸಿದರು.
ಅಕೌಂಟ್ಸ್ ಆಫೀಸರ್ ಮಂಜುನಾಥ ಜೆ.ಎ, ಎಸ್.ಎನ್. ಮಲ್ಲಿಕಾರ್ಜುನರಾವ್, ಸೆಕ್ಶನ್ ಸೂಪರ್ವೈಸರ್ ಕೆ. ಯುವರಾಜ ಹಾಗೂ ಸಿಬ್ಬಂದಿ ಇದ್ದರು.