ಗ್ರಂಥಗಳನ್ನು ರಕ್ಷಿಸಲು ವಿದ್ಯಾರ್ಥಿಗಳು ಮುಂದಾಗಬೇಕು: ಜಿ. ಇ. ಬಡಿಗೇರ್

07GDG07
Published on

ಗದಗ. ಗ್ರಂಥಗಳು ಜ್ಞಾನದ ಸಂಪತ್ತಾಗಿದ್ದು ವಿದ್ಯಾರ್ಥಿಗಳು  ಗ್ರಂಥಗಳನ್ನು ಉಪಯೋಗಿಸಿ ಅವುಗಳನ್ನು ಸುರಕ್ಷಿತವಾಗಿ ಗ್ರಂಥಾಲಯಕ್ಕೆ ಮರಳಿಸ ಬೇಕು  ಇದರಿಂದ ಇತರ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ ಎಂದು ಗ್ರಂಥಪಾಲಕ ಜಿ ಇ ಬಡಿಗೇರ್ ಅವರು ಹೇಳಿದರು.
ಡಾ ಪಿ ಜಿ ಎ  ಎಸ್  ಸಮಿತಿಯ   ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ನಿವೃತ್ತಿ ಹೊಂದಿದ ಗ್ರಂಥ ಪಾಲಕ ಜಿ ಇ ಬಡಿಗೇರ್ ಹಾಗೂ ಪಕ್ಕ ವಾದ್ಯಗಾರ ಗುರುನಾಥ್ ಸುತಾರ್ ಅವರಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರುಗಳು ಸನ್ಮಾನಗೊಂಡು ಜಿ ಇ ಬಡಿಗೇರ್ ಅವರು ಮಾತನಾಡುತ್ತ ಗ್ರಂಥಾಲಯವು ಕಾಲೇಜಿನ ಹೃದಯಭಾಗವಾಗಿರುತ್ತದೆ ಎಂದು ಅವರು ಗ್ರಂಥಾಲಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಸನ್ಮಾನ ಗೊಂಡು ಪಕ್ಕ ವಾದ್ಯಗಾರ ಗುರುನಾಥ್ ಸುತಾರ್ ಅವರು ಮಾತನಾಡುತ್ತಾ ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದಂತ ಎಲ್ಲ ಸಿಬ್ಬಂದಿ ವರ್ಗದವರಿಗೂ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಮೃತ್ಯುಂಜಯ ಶೆಟ್ಟರ್ ಅವರ  ಮಾತನಾಡಿ ಗ್ರಂಥಪಾಲಕ ಜಿ ಇ ಬಡಿಗೇರ್ ಹಾಗೂ ತಬಲಾ ಪಕ್ಕ ವಾದ್ಯಗಾರ ಗುರುನಾಥ್ ಸುತಾರ್ ಅವರುಗಳು ಸಮಗ್ರ ಮಹಾವಿದ್ಯಾಲಯದಲ್ಲಿ 33 ವರ್ಷಗಳ ಕಾಲ ತಮ್ಮ ಕಾಯಕವನ್ನು ಅಚ್ಚುಕಟ್ಟಾಗಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಅವರ ನಡೆ-ನುಡಿ ಸೌಜನ್ಯ ಸಹಕಾರ ಎಲ್ಲರಿಗೂ ಅನುಕರಣೆಯ ವಾದಂತವುಗಳು ಆಗಿವೆ ಎಂದು ಅವರು ಹೇಳಿದರು.
  ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ವಿ ಎಂ  ಗುರುಮಠ, ಅಧೀಕ್ಷಕ ಎಸ ಸಿ ಹಿರೇಮಠ, ಡಾ, ಸುಮಿತ್ರ ಹಿರೇಮಠ್, ಪ್ರೊ ಎನ್ಎಂ ಶೇ‌‌ಖ, ಪ್ರೊ ಎಂ ಎಸ್ ಮಠದ, ಡಾ, ಎಚ್ ಬಿ ಹೂಗಾರ್, ಡಾ. ಲತಾ ವೃತ್ತಿ ಕೊಪ್. ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಶ್ರೀಮತಿ ಸಾಕ್ಷಿ ಅಳಹುಂಡಿ ಅವರುಗಳು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net