ಸಂಗೀತದ ಮೂಲಕ ರಕ್ತದಾನ ಜಾಗೃತಿ

1wegd
Published on

ಗದಗ: ರಕ್ತದಾನ ಮಹಾದಾನವಾಗಿದ್ದು ಹೃದಯಾಘಾತದಂತ ಕಾಯಿಲೆಯನ್ನು ತಡೆಯುವುದರಲ್ಲಿ ರಕ್ತದಾನದ ಪಾತ್ರ ಅನನ್ಯ ಎಂದು ಉಪನ್ಯಾಸಕ ಗಂಗಾಧರ ಹಿಡಿಕಿಮಠ ಅವರು ಹೇಳಿದರು.
ಡಾ ಪಿ ಜಿ ಎ ಎಸ ಸಮಿತಿಯ  ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಗೀತದ ಮೂಲಕ ರಕ್ತದಾನ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾರಕ್ತದಾನ ಮಾಡುವುದರಿಂದ ದಾನಿ ಹಾಗೂ ಸ್ವೀಕರಿಸುವವರಿಗೂ ತುಂಬಾ ಪ್ರಯೋಜನಕಾರಿ. ಇದು ಜೀವಗಳನ್ನು ಉಳಿಸುತ್ತದೆ ಮತ್ತು ಜನರು ತಮ್ಮ ನಿರ್ಣಾಯಕ ಪರಿಸ್ಥಿತಿಯನ್ನು ಜಯಿಸಲು ಸಹಾಯ ಮಾಡುತ್ತದೆ. ರಕ್ತದಾನಿಗಳ ದೇಹವು ಪುನರುಜ್ಜೀವನವಾಗುತ್ತದೆ ಮತ್ತು ಹೊಸ ಕೋಶಗಳನ್ನು ಪಡೆಯುತ್ತದೆ ಮತ್ತು ಅದನ್ನು ತಾಜಾಗೊಳಿಸುತ್ತದೆ ಎಂದು ಅವರು ಹೇಳಿದರು.

ಹಿಂದಿ ಉಪನ್ಯಾಸಕ ಎನ್ ಎಂ ಶೇಖ್  ಅವರು ಮಾತನಾಡಿ ರಕ್ತದಾನದ ಬಗ್ಗೆ ಯಾರು ಭಯಪಡದೆ ಸ್ವಯಂ ಸ್ಫೂರ್ತಿಯಾಗಿ ರಕ್ತದಾನ ಮಾಡಬೇಕು  ಯುವಕರು ರಕ್ತದಾನ ಮಾಡಲು ಮುಂದೆ ಬಂದು ರಕ್ತದಾನದ ಮಹತ್ವ ಅದರ ಪ್ರಯೋಜನವನ್ನು ಹೇಳುವುದರ ಮೂಲಕ ರಕ್ತದಾನ ಮಾಡಲು ಜನರನ್ನು ಪ್ರೇರೇಪಿಸಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಶ್ರೀಮತಿ ಡಾ. ಸುಮಿತ್ರ ಹಿರೇಮಠ್ ವಹಿಸಿದ್ದರು. ವೇದಿಕೆ ಮೇಲೆ  ಡಾ ನಾರಾಯಣ ಅಕ್ಕಸಾಲಿ ಉಪಸ್ಥಿತರಿದ್ದರು
ಕುಮಾರಿ ರಂಜಿತಾ ಬಡಿಗೇರ್, ನಿಖಿತಾ, ವಿಜಯಲಕ್ಷ್ಮಿ ಹಿರೇಮಠ, ಶೃತಿ ಪವನ್, ಅನಗ ಕುಲಕರ್ಣಿ, ಪ್ರತಾಪ್ ರೆಡ್ಡಿ ಅವರುಗಳು ಸಂಗೀತದ ವಾದ್ಯಗಳನ್ನು ತಯಾರಿಸಿ ತೋರ್ಪಡಿಸಿದರು.
ಕಾರ್ಯಕ್ರಮದಲ್ಲಿ ರಾಹುಲ್ ರಾಠೋಡ್, ಯಶೋಧ ಮಾದರ್, ಸುಮತಿ ಮುರುಗೋಡ್, ಸುರೇಶ್ ಮಡಿವಾಳರ್, ಸಂಗೀತಾ ಡಿ ಎಂ, ವಾಣಿಶ್ರೀ, ವಿಜಯಕುಮಾರ್ ಬೊಶೆಟ್ಟಿ, ಶ್ರೇಯಸ್ ಕೃಷ್ಣಾಪುರ್, ಶ್ರೀ ಶಾಮ್ ರಾವ್ ಫುಲಾರೆ , ವಿ  ಎಂ ಪಟ್ಟದಕಲ್ , ಡಾ. ವಿಶ್ವನಾಥ್ ಹಿರೇಮಠ್,  ಡಾ. ನಾರಾಯಣ ಹಿರೇಕೊಳಚಿ, ಡಾ .ಎಸ್ ಎಸ್ ಗಡ್ಡದಮಠ,  ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಖ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net