ಪತ್ರಾಗಾರ ಕೂಟ ಮತ್ತು ಒಂದು ದಿನದ ವಿಚಾರ ಸಂಕಿರಣ

23GDG08
ಗದಗ ಪಂಡಿತ ಪಂಚಾರ ಗವಾಯಿಗಳವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಾಗಾರ ಕೂಟ ಮತ್ತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಮಂಜುಳಾ ಯಲಿಗಾರ ಉದ್ಘಾಟಿಸಿದರು. ಡಾ.ಬಾಲಕೃಷ್ಣ ಹೆಗಡೆ, ಡಾ. ವೈ. ಆರ್​. ಬೇಲೇರಿ, ಡಾ.ಎಸ್​.ಆರ್​.ನದಾ್​, ಡಾ. ಜಿ. ಎಸ್​. ಯತ್ನಟ್ಟಿ, ಪ್ರೊ. ಬಿ. ಎಂ. ಗಾಣಿಗೇರ, ಪ್ರೊ. ಬಿ. ಕೆ. ಪೂಜಾರ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಪ್ರಕಟಿಸುವ ಸಂಶೋಧಕರಿಗೆ ರಾಜ್ಯ ಪತ್ರಾಗಾರ ಇಲಾಖೆ ಹಣಕಾಸಿಕನ ನೆರವು ನೀಡಲಿದ್ದು,ಆಸಕ್ತ ಸಂಶೋಧಕರು ತಮ್ಮ ಪ್ರಕಟಣೆಗೆ ಮುಂದಾಗಬೇಕೆಂದು ಆ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ತಿಳಿಸಿದರು.
ಇಲ್ಲಿಯ ಪಂಡಿತ ಪಂಚಾರ ಗವಾಯಿಗಳವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜಿನ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗವು ರಾಜ್ಯ ಪತ್ರಾಗಾರ ಇಲಾಖೆಯ ಧಾರವಾಡ ಪ್ರಾದೇಶಿಕ ಕಚೇರಿಯ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಾಗಾರ ಕೂಟ ಮತ್ತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಮ್ಮ ಇಲಾಖೆಯು ರಾಜ್ಯದ ನಾಲ್ಕು ಕಡೆಗಳಲ್ಲಿ ಪ್ರಾದೇಶಿಕ ಕಚೇರಿಯನ್ನು ಹೊಂದಿದೆ. ಬೆಳಗಾವಿ ವಿಭಾಗದ ಇಲಾಖೆ ಕಳೆದ 30 ವರ್ಷಗಳಿಂದ ಧಾರವಾಡದಿಂದ ಕಾರ್ಯ ನಿರ್ವಹಿಸುತ್ತಿದೆ. ಇತಿಹಾಸದ ಆಕರಗಳನ್ನು ಸಂಗ್ರಹಿಸಿ, ಸಂರಸಿ ಅದನ್ನು ಸಾರ್ವಜನಿಕರಿಗೆ, ಸಂಶೋಧಕರಿಗೆ ಅನುಕೂಲವಾಗುವ ಕೆಲಸ ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ಐತಿಹಾಸಿಕ ದಾಖಲೆಗಳ ಬಗ್ಗೆ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ಇಲಾಖೆ ಪದವಿ ಪೂರ್ವ ಮತ್ತು ಪದವಿ ವಿದ್ಯಾಥಿರ್ಗಳಿಗೆ ಪ್ರಬಂಧ ಸ್ಪರ್ಧೆ, ವಿಚಾರ ಸಂಕಿರಣ ಏರ್ಪಡಿಸಿ ಹಣಕಾಸಿನ ಪ್ರೋತ್ಸಾಹವನ್ನೂ ನೀಡುತ್ತಿದೆ. ವಿದ್ಯಾಥಿರ್ಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇತಿಹಾಸ ತ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಕರ್ನಾಟಕ ದಣ ಪ್ರಾಂತದ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ ಮಾತನಾಡಿ, ರಾಷ್ಟ್ರದ ಇತಿಹಾಸ ರಚನೆಯಲ್ಲಿ ಮತ್ತು ದೇಶದ ಪ್ರಗತಿಗೆ ಐತಿಹಾಸಿಕ ದಾಖಲೆಗಳು ಬಹು ಮುಖ್ಯ ಪಾತ್ರ ವಹಿಸುತ್ತಿವೆ. ದಾಖಲೆಗಳೆಂದರೆ ಇತಿಹಾಸ ಮತ್ತು ಸಮಾಜದ ನಡುವೆ ಕೋನಶಿಲೆ ಇದ್ದಂತೆ. ದಾಖಲೆಗಳು, ಕಡತಗಳು, ವರ್ಣಚಿತ್ರಗಳು, ವೀಡಿಯೋ&ೋಟೋಗಳು, ನ್ಯಾಯಾಲಯ ಕಲಾಪಗಳ ದಸ್ತವೇಜುಗಳು, ದಿನಚರಿಗಳು, ಸರ್ಕಾರದ ಆಡಳಿತಾತ್ಮಕ ಕಾಗದ ಪತ್ರಗಳು ಪತ್ರಾಗಾರ ಇಲಾಖೆಯಲ್ಲಿ ವ್ಯವಸ್ಥಿತವಾಗಿ ಸಂರಸಲ್ಪಟ್ಟಿರುತ್ತವೆ. ಅವುಗಳನ್ನೇ ಅಧಿಕೃತ ದಾಖಲೆಗಳೆಂದು ಪರಿಗಣಿಸಲಾಗುತ್ತದೆ. ಈ ಬಗ್ಗೆ ವಿದ್ಯಾಥಿರ್ಗಳಲ್ಲಿ, ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಡಾ.ಹೆಗಡೆ ಅಭಿಪ್ರಾಯಪಟ್ಟರು.
ಕುರ್ತಕೋಟಿ ಕಾಲೇಜಿನ ಡಾ. ವೈ. ಆರ್​. ಬೇಲೇರಿ ಮಾತನಾಡಿ, ಕೈಫಿಯತ್ತುಗಳು, ಮರಾಠಾ ಬಕೇರ್​ಗಳು, ಹೆಳವರ ಪದ್ಯಗಳು, ತಾಳೆಗರಿ ಮೊದಲಾದವು ಪ್ರಮುಖ ಆಕರಗಳಾಗಿವೆ ಎಂದರು
ಡಾ.ಎಸ್​.ಆರ್​.ನದಾ್​, ಡಾ. ಜಿ. ಎಸ್​. ಯತ್ನಟ್ಟಿ, ಪ್ರೊ. ಬಿ. ಎಂ. ಗಾಣಿಗೇರ, ಪ್ರೊ. ಬಿ. ಕೆ. ಪೂಜಾರ್​, ಪ್ರೊ. ಮಹೇಶ ಗೋಲಪ್ಪನವರ್​, ಪ್ರೊ. ಕೆ. ಎಂ. ಗರಗ, ಬಸಣ್ಣ ಕುಂಬಾರ್​, ವಿ. ಎಸ್​. ಹೊಸಮಠ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net