ವಿದುಷಿ ಡಾ. ಲತಾ. ವೃತ್ತಿಕೊಪ್ಪನಿವೃತ್ತಿ

oppo_0
oppo_0
Published on

ಗದಗ. ಸಂಗೀತದಲ್ಲಿ ಭಾಷೆಗೆ ಮಹತ್ವ ಸ್ಥಾನ ನೀಡಲಾಗಿದ್ದು ಸಂಗೀತ ವಿದ್ಯಾರ್ಥಿಗಳು ಭಾಷಾ ವಿಷಯಗಳ ಕುರಿತು ಗಮನ ಹರಿಸಬೇಕೆಂದು ವಿದುಷಿ ಶ್ರೀಮತಿ ಡಾ. ಲತಾ ವೃತ್ತಿಕೊಪ್ಪ ಅವರು ಹೇಳಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ತಮಗೆ ಏರ್ಪಡಿಸಿದ  ನಿವೃತ್ತಿ ನಿಮಿತ್ಯ ಸನ್ಮಾನ ಕಾರ್ಯಕ್ರಮವನ್ನು ಪೂಜ್ಯ ಡಾ. ಕಲ್ಲಯ್ಯಜ್ಜನವರಿಂದ ಸ್ವೀಕರಿಸಿ ಅವರು ಮಾತನಾಡುತ್ತಾ ಸಂಗೀತ ವಿದ್ಯಾರ್ಥಿಗಳು ಸದಾ ಸಂಗೀತ ಕುರಿತು ಆ ಶಕ್ತಿಯನ್ನು ಹೊಂದಬೇಕು ಸಂಗೀತ ವಿದ್ಯಾರ್ಥಿಗಳಿಗೆ ಶ್ರೀ ವೀರೇಶ್ವರ ಪುಣ್ಯಾತ್ಮದಂತ ಪರಿಸರ ಎಲ್ಲಿ ಸಿಗುವುದಿಲ್ಲ ಎಂದು ಅವರು ಹೇಳಿದರು.
ಪ್ರಾಚಾರ್ಯ ಶ್ರೀಮತಿ ಡಾ ಸುಮಿತ್ರ ಹಿರೇಮಠ ಅವರು ಮಾತನಾಡಿ ಡಾ. ಶ್ರೀಮತಿ ಲತಾ ವೃತ್ತಿಕೊಪ್ಪ ಅವರು ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸಿದವರಾಗಿದ್ದು ನಿವೃತ್ತಿ ನಂತರವು ಅವರು ಮಹಾವಿದ್ಯಾಲಯಕ್ಕೆ ಬಂದು ವಿದ್ಯಾರ್ಥಿಗಳಿಗೆ ತಮ್ಮ ವಿಶಿಷ್ಟ ಶೈಲಿಯ ಠುಮರಿ ಗಾಯನವನ್ನು ಹೇಳಿಕೊಡಬೇಕೆಂದು ಅವರು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಸಮಿತಿಯ ಕಾರ್ಯಾಧ್ಯಕ್ಷರಾದ ಪೂಜ್ಯ ಡಾ. ಕಲ್ಲಯ್ಯ ಅಜ್ಜ ನವರು ವಹಿಸಿದ್ದರು ವಿದ್ಯಾರ್ಥಿಗಳಾದ ಯಶೋಧ ಮಾದರ್, ಸುಮತಿ ಮುರುಗೋಡ್, ನಿಕಿತಾ, ಸುರೇಶ್ ಮಡಿವಾಳರ್, ರಂಜಿತಾ ಬಡಿಗೇರ್, ವಾಣಿಶ್ರೀ, ವಿಜಯಲಕ್ಷ್ಮಿ ಹಿರೇಮಠ್, ಶೃತಿ ಪವನ್, ವಿಜಯಕುಮಾರ್ ಬೊಶೆಟ್ಟಿ, ಶ್ರೇಯಸ್ ಕೃಷ್ಣಾಪುರ್, ಶ್ರೀ ಶಾಮ್ ರಾವ್ ಫುಲಾರೆ , ವಿ  ಎಂ ಪಟ್ಟದಕಲ್ ,   ಡಾ. ನಾರಾಯಣ ಹಿರೇಕೊಳಚಿ, ಡಾ.  ಲತಾ ವೃತ್ತಿ ಕೊಪ್ಪ, ಡಾ .ಎಸ್ ಎಸ್ ಗಡ್ಡದಮಠ,  ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಖ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ. ಗಂಗಾಧರ ಹಿಡಿಕಿಮಠ, ವಿ ಎಂ ಗುರುಮಠ,ಗುರುನಾಥ್ ಸುತಾರ್, ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net