

ಗದಗ: ಶ್ರೀ ವೀರೇಶ್ವರ ಪುಣ್ಯಾಶ್ರಮದ ಹಿರಿಯ ಕಲಾವಿದರಾದ ಪಂಡಿತ್ ನಾಗಮುನಿ ಅವರು ಚಲನಚಿತ್ರ ಕ್ಷೇತ್ರಕ್ಕೆ ತಬಲಾ ನುಡಿಸಿ ಚಲನಚಿತ್ರ ರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆಂದು ಡಾ. ಹನುಮಂತ ಹೂಗಾರ್ ಅವರು ಹೇಳಿದರು.
ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಖ್ಯಾತ ತಬಲಾ ಕಲಾವಿದ ಪಂಡಿತ್ ನಾಗಮುನಿ ಅವರಿಗೆ ಏರ್ಪಡಿಸಿದ್ದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನಿವೃತ್ತ ಸಂಗೀತ ಶಿಕ್ಷಕ ಶ್ರೀ ಎಸ್ ಕೆ ಜೋಗಿ ಅವರು ಮಾತನಾಡಿ ಪಂಡಿತ್ ನಾಗಮುನಿಯವರು ಅತ್ಯಂತ ಪ್ರತಿಭಾವಂತ ತಬಲಾಕಲಾವಿದರಾಗಿದರು, ಅವರನ್ನು ಕಳೆದುಕೊಂಡ ತಬಲಾ ಲೋಕ ಬಡವಾಗಿದೆ ಎಂದು ಅವರು ಹೇಳಿದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಾದ ರಾಹುಲ್ ರಾಠೋಡ್ ಅವರು ಪ್ರಾರ್ಥನೆಗೈದರು. ಕುಮಾರಿ ಸಂಗೀತಾ ಡಿ ಎಂ. ಸುಮತಿ ಮುರುಗೋಡ್ ಅವರು ತಬಲಾ ಸೋಲು ನುಡಿಸಿದರು , ರಂಜಿತಾ ಬಡಿಗೇರ್ ಶಾಸ್ತ್ರಿಯ ಗಾಯನ ಮಾಡಿದರು.
ಡಾ. ನಾರಾಯಣ ಹಿರೇಕೊಳಚಿ, ಡಾ. ಲತಾ ವೃತ್ತಿ ಕೊಪ್ಪ, ಡಾ, ಕೊಡಗಾನೂರ ಹನುಮಂತ್, ಡಾ. ವಿ ವಿ ಹಿರೇಮಠ ಪ್ರೊ ವಿ .ಎಂ. ಗುರುಮಠ, ಉಪನ್ಯಾಸಕ ಎನ್ ಎಂ ಶೇಕ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ. ಯರ್. ಮೂಲಿಮನಿ, ವಿ ಎಂ ಪಟ್ಟದಕಲ್, ವಿದ್ಯಾರ್ಥಿ ವಿದ್ಯಾರ್ಥಿನಿಯರಾದ ಕುಮಾರಿ ಶ್ರುತಿ ಪವನ್, ವಿಜಯಲಕ್ಷ್ಮಿ ಹಿರೇಮಠ , ರಂಜಿತಾ ಬಡಿಗೇರ್, ಕೃತಿ ಸುಲಾಕೆ, ಸಂಗೀತ ಡಿ ಎಂ, ಸುಮತಿ ಮುರುಗೋಡ್, ರಾಹುಲ್ ರಾಠೋಡ್, ಅನಗ ಕುಲಕರ್ಣಿ, ಯಶೋಧ ಮಾದರ್, ಸಂಜೆ ಅಕ್ಕಸಾಲಿ, ಪಾಲ್ಗೊಂಡಿದ್ದರು.