ಸಂಗೀತ ಮಹಾವಿದ್ಯಾಲಯದಲ್ಲಿ ಪಂಚಾಕ್ಷರ ಗವಾಯಿಗಳವರ ಜಯಂತಿ

04GDG02
Published on

ಗದಗ: ಉಭಯ ಗಾಯನಚಾರ್ಯ ಪಂಡಿತ್ ಪಂಚಾಕ್ಷರ ಗವಾಯಿಗಳವರು ಭಾರತೀಯ ಸಂಗೀತಕ್ಕೆ ಸಲ್ಲಿಸಿದ ಕೊಡುಗೆ ಅನನ್ಯ ಎಂದು ಉಪನ್ಯಾಸಕ ಗಂಗಾಧರ ಹಿಡ್ಕಿಮಠ ಅವರು ಹೇಳಿದರು.
ಡಾ. ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಗಾನಯೋಗಿ ಪಂಡಿತ್ ಪಂಚಾಕ್ಷರ ಗವಾಯಿಗಳವರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಪಂಚಾಕ್ಷರ ಗವಾಯಿಗಳವರು ಸಂಗೀತ ಸಾಹಿತ್ಯ, ಕಲೆಯ ಸಂಗಮವಾಗಿದ್ದರು ಅವರು ನಾಡಿಗೆ ಸಲ್ಲಿಸಿದ ಕೊಡುಗೆಯನ್ನು  ಜನರಿಗೆ ತಿಳಿಸುವಂತಹ ಕಾರ್ಯವಾಗಬೇಕು. ಹುಟ್ಟು ಅಂದರಾದ   ಅವರು ಅಂದತ್ವವನ್ನು ಮೆಟ್ಟಿ ನಿಂತು ಮಾಡಿದ ಕಾರ್ಯ ತೋರಿದ ಧೈರ್ಯ ಇಡೀ ವಿಶ್ವವೇ ಬೆರಗಾಗುವಂಥ ರೋಚಕ ವ್ಯಕ್ತಿತ್ವವನ್ನು ಗಾನಯೋಗಿ ಪಂಡಿತ್ ಪಂಚಾಕ್ಷರ ಗವಾಯಿಗಳವರು ಹೊಂದಿದವರಾಗಿದ್ದರು ಎಂದು ಅವರು ಹೇಳಿದರು.
ಉಪನ್ಯಾಸಕ ಎಂ ಎಸ್ ಮಠದ ಅವರು ಮಾತನಾಡುತ್ತಾ ಪಂಡಿತ್ ಪಂಚಾಕ್ಷರ ಗವಾಯಿಗಳವರ ಕೃಪಾ ಆಶೀರ್ವಾದದಿಂದ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತರ ಮಟ್ಟದವರಿಗೆ ಶಿಕ್ಷಣವನ್ನು ಹುಟ್ಟುಹಾಕಿ ಸಂಗೀತ‌ದ ಜೊತೆಗೆ ಅಂದ ಅನಾಥ ಅಂಗವಿಕಲ ಮಕ್ಕಳಿಗೆ ಅನ್ನದಾಸೋವನ್ನು ನಿರಂತರವಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆಸಿಕೊಂಡು ಬರುತ್ತಿರುವ ಕಾರ್ಯ ಅನುಕರಣಿಯ ವಾಗಿರುತ್ತದೆ ಎಂದು ಅವರು ಹೇಳಿದರು.
ಖ್ಯಾತ ತಬಲವಾದ ವಾಯ್. ಆರ್ .ಮೂಲಿಮನಿ ಅವರು ಮಾತನಾಡುತ್ತಾ ವಚನಗಳನ್ನು ಹಿಂದುಸ್ತಾನಿ ಸಂಗೀತದಲ್ಲಿ ಮೊಟ್ಟಮೊದಲ ಬಾರಿಗೆ ಹಾಡಿದ ಕೀರ್ತಿ ಪಂಡಿತ್ ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ  ಕುಮಾರ್ ಮುತ್ತಿನಪಿಂಡಿಮಠ ,ಪಂಚಾಕ್ಷರಿ ಹಿಡ್ಕಿಮಠ, ವಿ ಎಂ ಪಟ್ಟದಕಲ್, ಎಸ್ ಡಿ ಕಾಡನ್ನವರ್, ಓಂಕಾರ್, ಎಚ್  ಓಲೆಕಾರ್‌ ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net