

"ರಾಮಾಯಣವು ಒಂದು ಪವಿತ್ರ ಮಹಾಕಾವ್ಯವಾಗಿದೆ"
ಗದಗ. ರಾಮಾಯಣವು ಒಂದು ಪವಿತ್ರ ಮಹಾಕಾವ್ಯವಾಗಿದ್ದು ಅದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಉಪನ್ಯಾಸಕ ಗಂಗಾಧರ ಹಿಡಿಕಿಮಠ ಅವರು ಹೇಳಿದರು.
ಡಾ ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡುತ್ತಾ ಮಹರ್ಷಿ ವಾಲ್ಮೀಕಿಯ ತತ್ವ ಆದರ್ಶಗಳು ಯುವ ಜನಾಂಗಕ್ಕೆ ದಾರಿದೀಪವಾಗಿದ್ದು ಪ್ರತಿಯೊಬ್ಬರೂ ರಾಮಾಯಣ ಕಾವ್ಯವನ್ನು ಓದಬೇಕೆಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಖ್ಯಾತ ತಬಲಾ ವಾದಕ ವಾ ಆರ್ ಮೂಲಿಮನಿ ಅವರು ಮಾತನಾಡಿ ಮಕ್ಕಳ ವ್ಯಕ್ತಿತ್ವ ವಿಕಾಸನ ಗೊಳಿಸುವಲ್ಲಿ ಮಹಾಕಾವ್ಯ ರಾಮಾಯಣ ಬಹು ಸಹಕಾರಿಯಾಗುತ್ತಿದ್ದು ನೀತಿ ಧರ್ಮ ಆಚಾರ ವಿಚಾರಗಳ ಸಂಗಮವಾಗಿದೆ ಈ ಕಾವ್ಯ ಎಂದು ಅವರು ಹೇಳಿದರು.
ಡಾ ಹನುಮಂತ್ ಹೂಗಾರ ಅವರು ಮಾತನಾಡಿ ರಾಮಾಯಣವು ವಿಶ್ವಕ್ಕೆ ನೀಡಿದ ಅಮೂಲ್ಯ ಕಾವ್ಯ ವಾಗಿದ್ದು ಮಹರ್ಷಿ ವಾಲ್ಮೀಕಿಯು ಆದರ್ಶನಿಯ ಸಂತ ಶ್ರೇಷ್ಠ ತತ್ವಜ್ಞಾನಿಯಾಗಿದ್ದಾರೆಂದು ಅವರು ಹೇಳಿದರು .
ಕಾರ್ಯಕ್ರಮದಲ್ಲಿ ಉಪನ್ಯಾಸಕ ಎನ್ಎಂ ಶೇಕ್, ಡಾ ಎಸ್ ಎಸ್ ಗಡ್ಡದಮಠ, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಶರಣಪ್ಪ ಕಲ್ಬುರ್ಗಿ, ವಿ ಎಂ ಪಟ್ಟದಕಲ್, ವಿ ಕೆ ಜೋಶಿ, ಬಿ ಎಚ್ ಜೋರಡ್ಡಿ, ಹೊಳೆಯಪ್ಪ ಓಲೆಕಾರ್, ಶೃತಿ ಪವನ್, ತ್ರಿವೇಣಿ, ಕುಮಾರ್ ಮುತ್ತಿನಪೆಂಡಿಮಠ, ವಿ ಕೆ ಜೋಶಿ, ಶಾಮರಾವ್ ಫುಲಾರೆ, ವಾಣಿಶ್ರೀ,ಉಪಸ್ಥಿತರಿದ್ದರು.