ಲಿಂಗ ಭೇದ ತಾರತಮ್ಯ ನಿವಾರಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ: ಸುಮಿತ್ರ ಹಿರೇಮಠ

IMG_20240510_100014
Published on

ಗದಗ: ವರ್ಣ ಭೇದ ಪದ್ಧತಿ, ಮೇಲು ಕೀಳು ಎಂಬ ತಾರತಮ್ಯ, ಲಿಂಗ ಭೇದ ನೀತಿ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸಲು ಪ್ರಯತ್ನಿಸಿದವರು ವಿಶ್ವಗುರು ಬಸವಣ್ಣನವರು ಎಂದು ಪ್ರಾಚಾರ್ಯ ಡಾ. ಸುಮಿತ್ರ ಹಿರೇಮಠ್ ಅವರು   ಹೇಳಿದರು.
ಡಾ ಪಿ ಜಿ ಎ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದ್ದರು.

ಕನ್ನಡ ಉಪನ್ಯಾಸಕ ವಿ ಎಂ ಗುರುಮಠ ಅವರು ಮಾತನಾಡಿ ವಚನ ಸಾಹಿತ್ಯವು ಅಮೂಲ್ಯವಾದ ವಿಚಾರಧಾರೆಗಳನ್ನು ಹೊಂದಿದ್ದು ಇಡೀ ವಿಶ್ವದ ಮನುಕುಲವೇ ಬೆರಗಾಗುವಂತ ಕಾರ್ಯ 12ನೇ ಶತಮಾನದಲ್ಲಿ ಭಕ್ತಿ ಭಂಡಾರ ಬಸವಣ್ಣ ನವರಿಂದ ಜರುಗಿತು ಎಂದು ಅವರು ಹೇಳಿದರು.
ಉಪನ್ಯಾಸಕ ಗಂಗಾಧರ ಹಿಡಿಕಿಮಠ ಅವರು ಮಾತನಾಡಿ ವಚನ ಸಾಹಿತ್ಯ ಬೆಳೆಸುವುದರಲ್ಲಿ ಸಂಗೀತಗಾರರ ಪಾತ್ರ ಅಮೂಲ್ಯ ವಾಗಿರುತ್ತದೆ ಎಂದು ಹೇಳಿ ಡಾ. ಶ್ರೀಮತಿ ಸಾಕ್ಷಿ ಅವರು ರಚಿಸಿದ ಸೋಲಾದರೇನಂತೆ ಎಂಬ ಗ್ರಂಥವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ  ಮಾಡಲಾಯಿತು.ವಿದ್ಯಾರ್ಥಿಗಳಾದ ರಾಹುಲ್ ರಾಠೋಡ್ ,   ಡಾ. ನಾರಾಯಣ ಹಿರೇಕೊಳಚಿ, ಡಾ.  ಲತಾ ವೃತ್ತಿ ಕೊಪ್ಪ, ಡಾ .ಎಸ್ ಎಸ್ ಗಡ್ಡದಮಠ,  ಡಾ, ಕೊಡಗಾನೂರ ಹನುಮಂತ್, ಉಪನ್ಯಾಸಕ ಎನ್ ಎಂ ಶೇಕ್, ಶ್ರೀಮತಿ ಮಹಾಲಕ್ಷ್ಮಿ ಹೆಗಡೆ, ಮೃತ್ಯುಂಜಯ ಮಠದ, ಶರಣಪ್ಪ ಕಲ್ಬುರ್ಗಿ, ವಾ ಯರ್ ಮೂಲಿಮನಿ, ವಿ ಎಂ ಪಟ್ಟದಕಲ್, ವಚನ ಸಾಹಿತ್ಯವನ್ನು ಹಾಡಿ ಮನಸ್ಸಿಗೆ ಮುದು ನೀಡಿದರು. ಶ್ರುತಿ ಪವನ್, ವಿಜಯಲಕ್ಷ್ಮಿ ಹಿರೇಮಠ , ರಂಜಿತಾ ಬಡಿಗೇರ್, ಕೃತಿ ಸುಲಾಕೆ, ಸಂಗೀತ ಡಿ ಎಂ, ಸುಮತಿ ಮುರುಗೋಡ್, ರಾಹುಲ್ ರಾಠೋಡ್, ಅನಗ ಕುಲಕರ್ಣಿ, ಯಶೋಧ ಮಾದರ್, ಸಂಜೆ ಅಕ್ಕಸಾಲಿ, ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಕ್ಷತಿ ಸುಲಾಕೆ ಸರ್ವರನ್ನು ಸ್ವಾಗತಿಸಿದರು ಕೊನೆಗೆ ರಂಜಿತಾ ಬಡಿಗೇರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net