ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉದ್ಯೋಗ ಮೇಳ

udp-7-ppc
Published on

ಉಡುಪಿ: ಉದ್ಯೋಗ ರಂಗದಲ್ಲಿ ಕೌಶಲ್ಯಗಳು ಅಗತ್ಯವಾಗಿದ್ದು, ಕಾಲೇಜಿನ ವತಿಯಿಂದ ನಡೆಯುತ್ತಿರುವ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿರುವುದು ಸಂತೋಷದ ವಿಚಾರ ಎಂದು ಅದಮಾರು ಮಠ ಎಜುಕೇಶನ್​ ಕೌನ್ಸಿಲ್​ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್​ ಹೊಳ್ಳ ಹೇಳಿದರು.

ಸೋಮವಾರ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಸೃಷ್ಟಿ ಇನ್ಫೋಟೆಕ್​ ಕುಂದಾಪುರ ಕಾರ್ಯನಿರ್ವಾಹಕ ನಿರ್ದೇಶಕ ಹರ್ಷವರ್ಧನ್​ ಶೆಟ್ಟಿ ಹಾಗೂ ಸಂಧ್ಯಾರಾಣಿ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಡಾ. ಪ್ರಕಾಶ್​ ರಾವ್​, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಡಾ. ರಮೇಶ್​ ಟಿ.ಎಸ್​., ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಮೋಹನ್​ ಉಡುಪ, ಐಕ್ಯೂಎಸಿ ಸಂಯೋಜಕ ಡಾ. ವಿನಯ್​ ಕುಮಾರ್​, ವೃತ್ತಿ ಮಾರ್ಗದರ್ಶನ ವಿಭಾಗದ ಸಂಯೋಜಕ ಡಾ. ಆನಂದ ಆಚಾರ್ಯ ಉಪಸ್ಥಿತರಿದ್ದರು. ಜಯಲಕ್ಷಿ$್ಮ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಧನ್ಯಶ್ರೀ ನಿರೂಪಿಸಿ, ಮುರಳಿ ವಂದಿಸಿದರು.

ಈ ಉದ್ಯೋಗ ಮೇಳದಲ್ಲಿ 1700ಕ್ಕಿಂತಲೂ ಅಧಿಕ ಆಕಾಂಕ್ಷಿಗಳು ನೋಂದಾವಣಿ ಮಾಡಿದ್ದು, 20ಕ್ಕೂ ಅಧಿಕ ಕಂಪೆನಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net