ಪ್ರಾಚಿನ ಕಾಲದಿಂದಲೂ ಭಾರತ ಸಂಪದ್ಭರಿತ ದೇಶ

udp-6-ppc
Published on

ಉಡುಪಿ: ರಾಷ್ಟ್ರದ ಸಾಂಸ್ಕತಿಕ ವಿಕಾಸಕ್ಕೆ ಜಗತ್ತಿನ ಮೊದಲ ಉದಾಹರಣೆ ಭಾರತ. ಪ್ರಾಚಿನ ಕಾಲದಿಂದಲೂ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿವಾಗಿದೆ. ಇದನ್ನೆಲ್ಲವನ್ನು ಅರಿತು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದು ಸಂವೇದನಾ ಪೌಂಡೇಶನ್​ ಸಂಚಾಲಕ ಪ್ರಕಾಶ್​ ಮಲ್ಪೆ ಹೇಳಿದರು.

ಸೋಮವಾರ ವಿದ್ಯಾಭಾರತಿ ಉಚ್ಛ ಶಿಕ್ಷಾ ಸಂಸ್ಥಾನ್​ ಮತ್ತು ಪೂರ್ಣಪ್ರಜ್ಞಾ ಕಾಲೇಜು ಆಶ್ರಯದಲ್ಲಿ ಕಾಲೇಜಿನ ಎ.ವಿ ಹಾಲ್​ನಲ್ಲಿ "ವಿಕಸಿತ ಭಾರತಕ್ಕಾಗಿ ಶಿಕ್ಷಕರ ಪಾತ್ರ"ದ ಕುರಿತ ಅಧ್ಯಾಪಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ಸಮುದಾಯವನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆ ಶಿಕ್ಷಕರದ್ದಾಗಿದೆ. ಈ ಕಾರ್ಯ ಯಶಸ್ವಿಯಾದರೆ ವಿಕಸಿತ ಭಾರತ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಐ.ಕ್ಯೂ.ಎ.ಸಿ ಯ ಸಂಯೋಜಕ ಡಾ. ವಿನಯ್​ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ದಕ್ಷಿಣ ಪ್ರಾಂತದ ಉಚ್ಛಶಿಕ್ಷಾ ಸಂಸ್ಥಾನದ ಸಂಯೋಜಕ ಡಾ. ಶಿವಾನಂದ ನಾಯಕ್​ ಸ್ವಾಗತಿಸಿದರು. ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಸಂತೋಷ್​ ಕುಮಾರ್​ ವಂದಿಸಿದರು. ರಾಜಶಂಕರ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net