ಕೆಲಸದ ಹಣ ಪಾವತಿ ಹೊಣೆ ಯಾರದು? - ವಿಟ್ಲ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ

PTR_25 APR_1
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.3502776, 0.44658324);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;
Published on

ವಿಟ್ಲ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಅಂಗಡಿಗಳಲ್ಲಿ ಸಾಲಗಳು ಹೆಚ್ಚಾಗುತ್ತಿದ್ದು, ಪಾವತಿಗೆ ಕ್ರಮ ಆಗುತ್ತಿಲ್ಲ. ೧೮ ವಾರ್ಡ್‌ನಲ್ಲಿ ಹಿಂದಿನ ಅಽಕಾರಿಗಳ ಅವಽಯಲ್ಲಿ ಆಗಿರುವ ಕೆಲಸದ ಹಣ ಪಾವತಿ ಹೊಣೆ ಯಾರು ಹೊರುವುದು. ಮಳೆಗಾಲದಲ್ಲಿ ತುರ್ತು ಕಾಮಗಾರಿಗಳಿಗೆ ಸಾಮಗ್ರಿಗಳು ಬೇಕಾದರೆ ಯಾವ ಅಂಗಡಿಯಿಂದ ತರುವುದು ಎಂಬುದು ಪ್ರಶ್ನೆಯಾಗಿದೆ. ಪರವಾನಗಿ ಪಡೆದ ಮೂಲ ಉದ್ದೇಶವನ್ನು ಮರೆಮಾಚಿ ಬೇರೆ ಕಾರ್ಯಕ್ಕೆ ಬಳಸುವ ಹುನ್ನಾರ ನಡೆಯುತ್ತಿದೆ. ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳುವ ಕಾರ್ಯವೂ ಆಗಿದೆ. ಪರವಾನಗಿ ಇಲ್ಲದೆ ಕಟ್ಟಡ ನಿರ್ಮಾಣ ಆಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಕೇಳಿಬಂತು.

೯೪ಸಿ ಹಾಗೂ ಸಿಸಿ ನಿವೇಶನದಲ್ಲಿ ನಿರ್ಮಾಣ ಮಾಡಿದ ಮನೆಗಳ ದಾಖಲೆಗಳ ಬಗ್ಗೆ ಗೊಂದಲ ಏರ್ಪಡಿಸುವುದು ಸರಿಯಲ್ಲ. ಈ ನಿವೇಶನಕ್ಕೆ ಸಿಂಗಲ್ ಸೈಟ್‌ನ ಅಗತ್ಯವಿಲ್ಲ, ಅದನ್ನು ಕೇಳುವುದೂ ಸರಿಯಲ್ಲ. ಪುಡಾ ಸಭೆಯಲ್ಲಿ ಸಮಸ್ಯೆ ಬಗ್ಗೆ ಮಾತನಾಡಬೇಕು. ತೆರಿಗೆ ಸಂಗ್ರಹ ವಿಚಾರದಲ್ಲಿ ಕಚೇರಿಗೆ ಆಗಮಿಸುವವರನ್ನು ಕಚೇರಿಯಲ್ಲಿ ಕಾಯಿಸುವ ಬದಲು ಅವರ ಸಂಪರ್ಕ ಮಾಹಿತಿ ಪಡೆದುಕೊಂಡು ಕಳುಹಿಸಿ, ವ್ಯವಸ್ಥೆಯಾದ ಬಳಿಕ ಅವರನ್ನು ಕರೆಸಬೇಕು. ತೆರಿಗೆ ಕಟ್ಟಲು ಬಂದವರಿಗೆ ಇ-ಖಾತೆ ಆಗಬೇಕು ಎಂದು ತೊಂದರೆ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಮುಖ್ಯಾಽಕಾರಿ ಕರುಣಾಕರ ವಿ., ಕಿರಿಯ ಅಭಿಯಂತ ಡೊಮೆನಿಕ್ ಡಿಮೆಲ್ಲೋ ಉಪಸ್ಥಿತರಿದ್ದರು. ಸದಸ್ಯರಾದ ಅರುಣ್ ವಿಟ್ಲ, ಹರೀಶ್ ಸಿ.ಎಚ್, ಜಯಂತ ಸಿ.ಎಚ್, ಕೃಷ್ಣ, ವಸಂತ, ಹಸೈನಾರ್ ನೆಲ್ಲಿಗುಡ್ಡೆ, ವಿಕೆಎಂ ಅಶ್ರಫ್, ಅಶೋಕ್‌ಕುಮಾರ್ ಶೆಟ್ಟಿ, ಶಾಕೀರ, ಸುನೀತಾ, ವಿಜಯಲಕ್ಷ್ಮೀ, ಪದ್ಮನಿ, ಲತಾವೇಣಿ, ನಾಮನಿರ್ದೇಶಿತ ಸದಸ್ಯ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್ ಸಮಸ್ಯೆಗಳನ್ನು ಹೇಳಿಕೊಂಡರು.

ಮಳೆಗೆ ಮೊದಲು ಚರಂಡಿ ದುರಸ್ತಿ

ಮಳೆ ಬರುವ ಮೊದಲು ಚರಂಡಿಗಳ ದುರಸ್ತಿ ನಡೆಯಬೇಕು. ವಿವಿಧ ರಸ್ತೆಯಲ್ಲಿ ಚರಂಡಿ ಮೇಲಿನ ಸ್ಲ್ಯಾಬ್ ತುಂಡಾಗಿ ಸಮಸ್ಯೆಯಾಗುತ್ತಿದೆ. ಸಂತೆ ಅಂಗಡಿಯವರು ಮತ್ತೆ ರಸ್ತೆಗೆ ಬರುತ್ತಿದ್ದು, ಅದನ್ನು ಪಂಚಾಯಿತಿ ವಶಕ್ಕೆ ಪಡೆಯುವ ಕಾರ್ಯವಾಗಬೇಕು. ನೀರು ಸರಬರಾಜು ವ್ಯವಸ್ಥೆಯನ್ನು ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂಬ ಆಗ್ರಹ ಕೇಳಿಬಂತು.

ಸಂಚಾರ ಸಮಸ್ಯೆಗೆ ಕ್ರಮ ಅಗತ್ಯ

ದೇವಸ್ಥಾನ ರಸ್ತೆಯಲ್ಲಿ ಎಲ್ಲ ವಾಹನ ನಿಲ್ಲಿಸಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಬಸ್ ನಿಲ್ದಾಣ ಏಲಂ ಆಗಿದ್ದು, ಬಸ್ ಮಾತ್ರ ರಸ್ತೆಯಲ್ಲಿ ನಿಲ್ಲುತ್ತಿದೆ. ವಾಹನ ಸಂಚಾರ ನಿಯಂತ್ರಣ ಸರಿಪಡಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾದರೂ ಕೆಲಸ ನಡೆಯುತ್ತಿಲ್ಲ. ಸಂಚಾರ ನಿಯಂತ್ರಣಕ್ಕೆಂದು ಒಬ್ಬರು ಉಪನಿರೀಕ್ಷಕರನ್ನು ನೇಮಕ ಮಾಡಿದ್ದು, ರಸ್ತೆಯಲ್ಲಿ ನಿಂತು ವಾಹನ ಸಂಚಾರ ಸರಿಪಡಿಸುವ ಕಾರ್ಯ ಮಾಡಬೇಕು. ವಿಜಯವಾಣಿ ವರದಿಯೂ ಸಭೆಯಲ್ಲಿ ಪ್ರಸ್ತಾಪವಾಗಿತು.

ಪೌರ ಕಾರ್ಮಿಕರಿಗೆ ನಿಂದನೆ

ಸಾರ್ವಜನಿಕರು ಹಸಿ ಕಸ -ಒಣ ಕಸ ವಿಂಗಡಿಸಿ, ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಬೋಳಂತೂರಿನಲ್ಲಿ ಹಸಿ ಕಸದ ವಾಹನಕ್ಕೆ ಒಣ ಕಸವನ್ನು ಹಾಕಲು ಬಂದಿದ್ದು, ಇದನ್ನು ಸ್ವೀಕರಿಸದ ಕಾರಣ ಪೌರ ಕಾರ್ಮಿಕರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಹೇಳಲು ಬಂದ ಪೌರ ಕಾರ್ಮಿಕರನ್ನು ಸಮಸ್ಯೆ ಕೇಳದೆ, ಹೊರಕಳುಹಿಸುವ ಕಾರ್ಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net