ಇ-ಖಾತಾ ಅಭಿಯಾನ ಪ್ರಾರಂಭ - ಮೇ ೧೦ ಕೊನೆಯ ದಿನ

Published on

ವಿಟ್ಲ: ಸರ್ಕಾರದ ಆದೇಶದಂತೆ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಖಾತಾ ಅಭಿಯಾನ ಪ್ರಾರಂಭವಾಗಿದ್ದು, ’ಎ’ ರಿಜಿಸ್ಟರ್ ಹಾಗೂ ’ಬಿ’ ರಿಜಿಸ್ಟ್ರರ್ ಮೂಲಕ ದಾಖಲಿಸಿಕೊಂಡು ಇ-ಖಾತೆಯನ್ನು ಪಡೆಯಬಹುದು. ಕಟ್ ಕನ್ವರ್ಷನ್ ಆದ ಸ್ವತ್ತುಗಳಿಗೆ ಸುಲಭವಾಗಿ ’ಬಿ’ ರಿಜಿಸ್ಟ್ರರ್ ಮೂಲಕ ದಾಖಲಿಸಿಕೊಂಡು ಇ-ಖಾತೆಯನ್ನು ಪಡೆಯಲು ಅವಕಾಶವಿದ್ದು, ಸುತ್ತೋಲೆಯ ಪ್ರಕಾರ ಮೇ ೧೦ ಕೊನೆಯ ದಿನವಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಮತ್ತು ಮುಖ್ಯಾಽಕಾರಿ ಕರುಣಾಕರ ವಿ. ಹೇಳಿದರು.

’ಬಿ’ ರಿಜಿಸ್ಟ್ರರ್ ಮೂಲಕ ಖಾತಾ ಪಡೆಯಲು ೨೦೨೪, ಸೆ.೧೦ರ ಮೊದಲು ನೋಂದಣಿಯಾದ ಆಸ್ತಿಗೆ ಸಂಬಂಽಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ಮಾರಾಟ ಪತ್ರ/ದಾನಪತ್ರ/ ವಿಭಾಗ ಪತ್ರ/ ಹಕ್ಕು ಖುಲಾಸೆ ಪತ್ರ, ಪ್ರಸಕ್ತ ಸಾಲಿನವರೆಗಿನ ಋಣಭಾರ ಪ್ರಮಾಣ ಪತ್ರ (ಇ.ಸಿ.), ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ, ಮಾಲೀಕರ -ಟೋ ಮತ್ತು ಸ್ವತ್ತಿನ -ಟೋ, ಮಾಲೀಕರ ಗುರುತಿನ ದಾಖಲೆ ಪ್ರತಿಯನ್ನು ನೀಡಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಲ್ಲ ದಾಖಲೆಗಳನ್ನು ಏಕಕಾಲದಲ್ಲಿ ಒದಗಿಸಿದಲ್ಲಿ ಸಕಾಲದ ಮೂಲಕ ೭ ದಿನಗಳಲ್ಲಿ ಅರ್ಜಿ ವಿಲೇವಾರಿಯಾಗಿ ಇ-ಖಾತೆ ಫಲಾನುಭವಿಗಳಿಗೆ ಲಭಿಸಲಿದೆ. ಬಿ ರಿಜಿಸ್ಟ್ರರ್‌ನಲ್ಲಿ ದಾಖಲಿಸುವ ಸ್ವತ್ತುಗಳಿಗೆ ಮೊದಲ ಬಾರಿ ಡಬ್ಬಲ್ ಟ್ಯಾಕ್ಸ್ ಬೀಳಲಿದ್ದು, ಮುಂದಿನ ವರ್ಷದಿಂದ ಸಿಂಗಲ್ ಟ್ಯಾಕ್ಸ್ ಆಗಲಿದೆ. ಪ್ರಸ್ತುತ ೧೯೩ ಸ್ವತ್ತುಗಳಿಗೆ ಡಬ್ಬಲ್ ಟ್ಯಾಕ್ಸ್ ವಿಽಸಲಾಗಿದ್ಡು ಈ ಆಸ್ತಿ ಮಾಲೀಕರು ಬಿ ರಿಜಿಸ್ಟ್ರರಿನಲ್ಲಿ ದಾಖಲಿಸಿ ಇ-ಖಾತೆ ಪಡೆಯಬಹುದು. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೮೦೦ಕ್ಕೂ ಅಽಕ ಕಟ್ ಕನ್ವರ್ಷನ್ ಆಗಿರುವ ಸ್ವತ್ತುಗಳು ಖಾತಾ ಆಗದೆ ಸಮಸ್ಯೆಯಲ್ಲಿವೆ . ಹೆಚ್ಚಿನ ಮಾಹಿತಿಯನ್ನು ಪಟ್ಟಣ ಪಂಚಾಯಿತಿ ಸಹಾಯವಾಣಿ ೦೮೨೫೫-೨೩೯೨೨೦ ಮೂಲಕ ಪಡೆಯಬಹುದು ಎಂದು ತಿಳಿಸಿದರು.

ಸಮುದಾಯ ಸಂಘಟನಾಽಕಾರಿ ಶ್ರೀಶೈಲ ಸಂಕನ ಗೌಡ, ಕಂದಾಯ ವಸೂಲಿಗಾರರಾದ ಚಂದ್ರಶೇಖರ ವರ್ಮ ಮತ್ತಿತರರು ಉಪಸ್ಥಿತರಿದ್ದರು.

ನೀರಿನ ಬಳಕೆಯಲ್ಲಿ ಎಚ್ಚರವಿರಲಿ

ವಿಟ್ಲ ಪಟ್ಟಣ ಪಂಚಾಯಿತಿಯ ಕೆಲವು ಭಾಗದಲ್ಲಿ ನೀರಿನ ರೇಷನಿಂಗ್ ಮಾಡಲಾಗುತ್ತಿದೆ. ಈಗಲೇ ನೀರನ್ನು ಮಿತವಾಗಿ ಬಳಸುವ ಮೂಲಕ ಎಚ್ಚರ ವಹಿಸಬೇಕಾಗಿದೆ. ಕುಡಿಯುವ ನೀರನ್ನು ಗಿಡಗಳಿಗೆ ಹಾಗೂ ವಾಹನ ತೊಳೆಯುವ ಉದ್ದೇಶಕ್ಕೆ ಬಳಕೆ ಮಾಡುವುದು ಕಂಡುಬಂದಲ್ಲಿ ತಕ್ಷಣ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಮುಖ್ಯಾಽಕಾರಿ ಕರುಣಾಕರ ವಿ. ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net