ಹೂಗ್ಯಂ ಸಮೀಪ ಪವರ್‌ಸ್ಟೇಷನ್

ಹೂಗ್ಯಂ ಸಮೀಪದಲ್ಲಿ ಪವರ್ ಸ್ಟೇಷನ್ ಸ್ಥಾಪಿಸುವ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಸ್ಥಳ ಪರಿಶೀಲಿಸಿ, ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಂಕರ್, ಶರವಣ್, ತಂಗವೇಲು ಇತರರು ಇದ್ದರು.

23 ಹನೂರು 5 ಎ ಕೂಡಲೂರಿನಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.
ಹೂಗ್ಯಂ ಸಮೀಪದಲ್ಲಿ ಪವರ್ ಸ್ಟೇಷನ್ ಸ್ಥಾಪಿಸುವ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಸ್ಥಳ ಪರಿಶೀಲಿಸಿ, ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಂಕರ್, ಶರವಣ್, ತಂಗವೇಲು ಇತರರು ಇದ್ದರು. 23 ಹನೂರು 5 ಎ ಕೂಡಲೂರಿನಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.
Published on

ಹನೂರು: ತಾಲೂಕಿನ ಹೂಗ್ಯಂ ಗ್ರಾಮ ಸಮೀಪದ ಮಿನ್ನತ್ತುಹಳ್ಳ ಜಲಾಶಯದ ಬಳಿ ಪವರ್ ಸ್ಟೇಷನ್ ಸ್ಥಾಪಿಸುವ ಸಂಬಂಧ ಶಾಸಕ ಎಂ.ಆರ್ ಮಂಜುನಾಥ್ ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ಈ ವೇಳೆ ಅವರು ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ರೈತರು ಕೃಷಿಯನ್ನೇ ಅವಲಂಭಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ವಿದ್ಯುತ್ ಸಮಸ್ಯೆ ಆಗಾಗ್ಗೆ ತಲೆದೂರುತ್ತಿರುವುದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ಪವರ್ ಸ್ಟೇಷನ್ ಸ್ಥಾಪಿಸುವಂತೆ ಹಲವು ವರ್ಷಗಳಿಂದ ರೈತರು ಒತ್ತಾಯಿಸುತ್ತಿದ್ದಾರೆ. ಆದರೆ ಈವರೆಗೂ ಸಾಧ್ಯವಾಗಿಲ್ಲ. ಇದನ್ನು ಮನಗಂಡು ರೈತರ ಬೇಡಿಕೆಗೆ ಅನುಗುಣವಾಗಿ ಪವರ್ ಸ್ಟೇಷನ್ ಸ್ಥಾಪಿಸಲು ಕ್ರಮ ವಹಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ನೀಗಲಿದೆ. ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಈ ಬಗ್ಗೆ ಮನದಟ್ಟು ಮಾಡಿಕೊಂಡು ಪವರ್ ಸ್ಟೇಷನ್ ತೆರೆಯಲು ಅಗತ್ಯ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಎಇಇ ಶಂಕರ್, ಆರ್‌ಎಫ್‌ಒ ಮಾದೇಶ್, ಗ್ರಾಮ ಆಡಳಿತ ಅಧಿಕಾರಿ ಶರವಣ ಹಾಗೂ ಇನ್ನಿತರರು ಇದ್ದರು.

ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ: ಇದಕ್ಕೂ ಮುನ್ನಾ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲೂರಿನಲ್ಲಿ ಪವರ್‌ಸ್ಟಾರ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ಶಾಸಕ ಎಂ.ಆರ್ ಮಂಜುನಾಥ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಚಿನ್ನವೆಂಕಟ, ಹುಚ್ಚಯ್ಯ, ಗೋವಿಂದ, ತಂಗವೇಲು, ಕುಮಾರ್, ರಾಜೇಂದ್ರ, ಜಡೇಸ್ವಾಮಿ, ಕೃಷ್ಣಪ್ಪ, ಮುನಿಯಪ್ಪ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net