

ಚಿಕ್ಕಬಳ್ಳಾಪುರ: ಪವರ್ ಸ್ಟಾರ್ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಪ್ರಾರ್ಥಿಸಿ, ಕರ್ನಾಟಕದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಂಧ್ರದ ಪಿಟಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ನಟ ಪವನ್ ಕಲ್ಯಾಣ್ ಸ್ಪರ್ಧಿಸಿದ್ದಾರೆ. ಇಲ್ಲಿ ಚುನಾವಣೆಯಲ್ಲಿ ನಾಯಕ ಜಯಭೇರಿ ಬಾರಿಸಲು ಪ್ರಾರ್ಥಿಸಿ, ಅಖಿಲ ಭಾರತ ಚಿರಂಜೀವಿ ಯುವತ ಸಂಸ್ಥಾಪಕ ಅಧ್ಯಕ್ಷ ರವಣಸ್ವಾಮಿ ನಾಯ್ಡು ಮತ್ತು ಜನ ಸೇನಾ ಪಕ್ಷದ ರಾಷ್ಟ್ರೀಯ ಕಮಿಟಿಯ ಸದಸ್ಯೆ ದಾರಂ ಅನಿತಕ್ಕ ನೇತೃತ್ವದಲ್ಲಿ ಚಿಂತಾಮಣಿಯ ಬೂರಗಮಾಕಲಹಳ್ಳಿಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ವಿಶೇಷ ಅಭಿಷೇಕವನ್ನು ನೆರವೇರಿಸಲಾಯಿತು.
ಆಲಯದ ಮುಂಭಾಗದಲ್ಲಿನ ಬೃಹತ್ ಶ್ರೀ ವೀರಾಂಜನೇಯ ಸ್ವಾಮಿ ವಿಗ್ರಹಕ್ಕೆ ಮಾಲಾರ್ಪಣೆ ಮಾಡಲಾಯಿತು. ಜನಾಸೇನಾ ಪಕ್ಷದ ಬಾವುಟ ಮತ್ತು ಪವನ್ ಕಲ್ಯಾಣ್ ಚಿತ್ರಪಟಗಳನ್ನು ಹಿಡಿದು ಗೆಲುವಿನ ಘೋಷಣೆಗಳನ್ನು ಕೂಗಲಾಯಿತು.