ವಿದ್ಯುತ್ ಆಘಾತಕ್ಕೆಪವರ್‌ಮನ್ ಬಲಿ

Vikas Mescom Uppinangady
Published on

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಪಿಲಿಂಕಲ್ ಎಂಬಲ್ಲಿ ಭಾನುವಾರ ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿದ್ದ ಲೋಪ ಸರಿಪಡಿಸಲು ಮುಂದಾದ ಪವರ್‌ಮನ್ ವಿಕಾಸ್(26) ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ವಿಜಯಪುರ ನಿವಾಸಿ ವಿಕಾಸ್ ಐದು ವರ್ಷಗಳಿಂದ ಕಲ್ಲೇರಿ ವಲಯ ಮೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಭಾನುವಾರ ಮಳೆಯಿಂದಾಗಿ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಅದನ್ನು ಅವರು ಸರಿಪಡಿಸಲು ಮುಂದಾಗಿದ್ದರು. ವಿಕಾಸ್ ಪತ್ನಿ ಹಾಗೂ ಒಂದು ತಿಂಗಳು ಪ್ರಾಯದ ಮಗುವನ್ನು ಅಗಲಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net