ಲಂಚ ಸ್ವೀಕರಿಸುತ್ತಿದ್ದ ಲೈನ್‌ಮನ್ ಲೋಕಾಯುಕ್ತ ಬಲೆಗೆ

Ramesh
ರಮೇಶ್
Published on

ಕುಂದಾಪುರ: ವಿದ್ಯುತ್‌ಲೈನ್ ನಿಷ್ಕ್ರಿಯಗೊಳಿಸಲು 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಬೈಂದೂರು ಮೆಸ್ಕಾಂ ಲೈನ್‌ಮನ್, ಬೆಳಗಾವಿ ನಿವಾಸಿ ರಮೇಶ್ ಎಂಬಾತ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಮನೆ ಸಮೀಪದ ಅಪಾಯಕಾರಿ ಮರ ಕಡಿಯುವ ಸಂದರ್ಭ ಲೈನ್‌ಕಟ್ ಮಾಡಿಕೊಡುವಂತೆ ಮಹಿಳೆಯೊಬ್ಬರು ಮನವಿ ಮಾಡಿದ್ದರು. ಅದಕ್ಕೆ ರಮೇಶ್ 4 ಸಾವಿರ ರೂ. ಬೇಡಿಕೆಯಿಟ್ಟಿದ್ದನು. ಮಹಿಳೆ ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು, ರಮೇಶ್ 2 ಸಾವಿರ ರೂ. ಪಡೆಯುತ್ತಿದ್ದ ಸಂದರ್ಭ ಡಿವೈಎಸ್ಪಿ ಪ್ರಕಾಶ್, ಇನ್‌ಸ್ಪೆಕ್ಟರ್ ಜಯರಾಮ್ ಡಿ.ಗೌಡ ಹಾಗೂ ಸಿಬ್ಬಂದಿ ದಾಳಿ ನಡೆಸಿ ವಶಕ್ಕೆ ಪಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net