

ಹನೂರು: ತಾಲೂಕಿನ ನೆಲ್ಲೂರು ಗ್ರಾಮದ ಬಳಿ ಶುಕ್ರವಾರ ಸೆಸ್ಕ್ನಿಂದ ಕೈಗೊಂಡಿದ್ದ ತ್ರೈಮಾಸಿಕ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಪವರ್ಮೆನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹನೂರಿನ ರಾಹುಲ್ (30) ಮೃತ. ಇವರು ರಾಮಾಪುರ ಶಾಖೆಯ ಕೂಡ್ಲೂರು ಭಾಗದಲ್ಲಿ ಕೈಗೊಂಡಿದ್ದ ತ್ರೈ ಮಾಸಿಕ ಕಾರ್ಯಾಚರಣೆಗೆ ಸಿಬ್ಬಂದಿಯೊಂದಿಗೆ ತೆರಳಿದ್ದರು. ವಿದ್ಯುತ್ ಕಂಬವೇರಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಸಿಡಿಲು ಬಡಿದು ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ರಾಮಾಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ.