

ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಸೆ.19ರಂದು ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ನಗರ ಪ್ರದೇಶಗಳಾದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕೆ ಬಡಾವಣೆ, ಎಂ.ಸಿ ರಸ್ತೆ, ತಾವರೆಕೆರೆ, ನೆಹರುನಗರ, ಉದಯಗಿರಿ, ಸಾದತ್ ಮೊಹಲ್ಲಾ, ಚನ್ನಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ಬೆಂಗಳೂರು ಮುಖ್ಯರಸ್ತೆಯ ಹೆಬ್ಬಾಳು ಹಾಗೂ ಗ್ರಾಮಾಂತರ ಪ್ರದೇಶಗಳಾದ ಶ್ರೀನಿವಾಸಪುರ ಗೇಟ್, ಹನಕೆರೆ ಐ.ಪಿ ವ್ಯಾಪ್ತಿ, ಕೀಲಾರ ಐ.ಪಿ ವ್ಯಾಪ್ತಿ, ಬಸವನಪುರ ಐ.ಪಿ ವ್ಯಾಪ್ತಿ, ಬೂದನೂರು, ಭೂತನಹೊಸೂರು, ಚನ್ನಪ್ಪನದೊಡ್ಡಿ, ಅಂಬರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.