ಮೈಸೂರಿನ ವಿದ್ಯುತ್ ಸರಬರಾಜು ವ್ಯತ್ಯಯ

s_636777717725693583_Power_Cut
Published on

ವಿ.ವಿ. ಮೊಹಲ್ಲಾ ಉಪವಿಭಾಗದ 66/11 ಕೆ.ವಿ. ವಿಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸ ನಡೆಯಲಿದೆ. ಹಾಗಾಗಿ ಆಗಸ್ಟ್ 24ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಗರದ ಕೆಲ ಪ್ರದೇಶದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿಜಯನಗರ 1ನೇ ಹಂತ, ಅಂಬರೀಶ್ ರಸ್ತೆ, ಯೋಗ ನರಸಿಂಹಸ್ವಾಮಿ ದೇವಸ್ಥಾನದ ಸುತ್ತಮುತ್ತ, ಕೊಡವ ಸಮಾಜ ಸುತ್ತಮುತ್ತ, ಹಿನಕಲ್ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net