ಬೆಳಗಾವಿಯಲ್ಲಿ ಮೇ 28ರಂದು ಕರೆಂಟ್ ಇರಲ್ಲ

220-kv-substation-equipment-details.jpg
Published on



ಬೆಳಗಾವಿ: ತುರ್ತು ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆ ಮೇ 28ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಹೊನಗಾ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಬೈಲೂರ, ಜುಮನಾಳ, ಹೆಗ್ಗೇರಿ, ಕೆಂಚಾನಟ್ಟಿ, ಬೆನ್ನಾಳಿ, ದಾಸರವಾಡಿ, ಜೋಗ್ಯಾನಟ್ಟಿ, ಭೂತರಾಮಟ್ಟಿ, ಬಂಬರಗಾ, ಸಿದ್ದಗಂಗಾ ಆಯಿಲ್ ಮಿಲ್, ತುಳಜಾ ಅಲ್ಲಾಯ್ಸ, ಹತ್ತರಕಿ ಫೀಡ್ಸ್, ವಿನಾಯಕ ಸ್ಟೀಲ್ ಇಂಡಸ್ಟ್ರೀಸ್, ಹರ್ಷದೃವ, ಜಿ. ಹೊಸೂರ, ಗುಗ್ರ್ಯಾನಟ್ಟಿ, ಗೋಡಿಹಾಳ, ರಾಮದುರ್ಗ, ಉಕ್ಕಡ, ವಂಟಮುರಿ, ಮಾಶಾನಟ್ಟಿ, ಹಾಲಭಾವಿ, ಬೊಮ್ಮನಟ್ಟಿ, ವೀರಭಾವಿ, ಹಳೆ ಹೊಸೂರ, ಹೊಸ ಹೊಸೂರ, ಸುತಗಟ್ಟಿ, ಹೊನಗಾ, ದೇವಗಿರಿ ಗ್ರಾಮಗಳಿಗೆ ಹಾಗೂ ಹೊನಗಾ ಔದ್ಯೋಗಿಕ ಕ್ಷೇತ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಉದ್ಯಮಭಾಗ ಉಪಕೇಂದ್ರದಿಂದ ವಿದ್ಯುತ ಸರಬರಾಜು ಆಗುವ ಖಾನಾಪುರ ರಸ್ತೆ, ಉದ್ಯಮಬಾಗ ಕೈಗಾರಿಕೆ ಪ್ರದೇಶಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 4 ಘಂಟೆಯವರೆಗೆ ಅನಿಯಮಿತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಗ್ರಾಮೀಣ ವಿಭಾಗದ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net