

ವಿಜಯಪುರ: ಉಕ್ಕಲಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ವಿವಿಧ ಮಾರ್ಗಗಳಲ್ಲಿ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಸೆ.14 ರಂದು ಬೆಳಗ್ಗೆ 6 ರಿಂದ 10 ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಅಂದು ಶಿವಣಗಿ ಐಪಿ, 11 ಕೆವಿ ಮಲ್ಟಿವಿಲೇಜ್ ವಾಟರ್ ಸಪ್ಲಾಯ್ ಫೀಡರ್, ಯಂಭತ್ನಾಳ ಐಪಿ, ಹಡಗಲಿ ಐಪಿ, ರಾಮತೀರ್ಥ ಐಪಿ ಹಾಗೂ ಶಿವಣಗಿ ನಿರಂತರ ಜ್ಯೋತಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಹೆಸ್ಕಾಂ ಜತೆಗೆ ಗ್ರಾಹಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ವಿನಂತಿದ್ದಾರೆ.