

ಮಡಿಕೇರಿ:
ಕೊಡಗಿನಲ್ಲಿ ಕಾಫಿ ಎಸ್ಟೇಟ್, ಕಾಡು, ಗುಡ್ಡಗಾಡು ಪ್ರದೇಶಗಳ ಮೂಲಕ ವಿದ್ಯುತ್ ಜಾಲ ಹಾದು ಹೋಗುತ್ತದೆ. ಹಾಗಾಗಿ ಇಂಥ ಪ್ರದೇಶದಲ್ಲಿ ವಿದ್ಯುತ್ ಮಾರ್ಗದ ನಿರ್ವಹಣೆ ಸೆಸ್ಕ್ ಪಾಲಿಗೆ ದೊಡ್ಡ ಸವಾಲಿನ ಕೆಲಸ. ಇದರ ಜತೆಗೆ ಜೂನ್‌ನಿಂದ ಅಕ್ಟೋಬರ್ ತನಕ ಮಳೆಯ ಹೊಡೆತ ವಿದ್ಯುತ್ ಸರಬರಾಜಿನ ಮೇಲೆ ಇನ್ನಿಲ್ಲದ ಪರಿಣಾಮ ಬೀರುತ್ತದೆ. ಸಕಾಲದಲ್ಲಿ ಮಳೆ ಬಾರದಿದ್ದರೆ ನವೆಂಬರ್‌ನಿAದ ಮೇ ವರೆಗೆ ಕಾಫಿ ತೋಟಗಳಿಗೆ ನೀರು ಹಾಯಿಸಲು ಭಾರಿ ಪ್ರಮಾಣದಲ್ಲಿ ವಿದ್ಯುತ್ ಬೇಕಾಗುತ್ತದೆ. ಈ ವೇಳೆ ಗುಣಮಟ್ಟದ ವಿದ್ಯುತ್ ಪೂರೈಸಲು ಕೆಪಿಟಿಸಿಎಲ್ ಪರದಾಡಬೇಕಾದ ಸ್ಥಿತಿ ಜಿಲ್ಲೆಯಲ್ಲಿ ಇದೆ.
ಕೊಡಗಿನಲ್ಲಿ ಕೆಲವೊಂದು ಪ್ರದೇಶ ಹೊರತುಪಡಿಸಿದರೆ ಈಗಲೂ ಹಳೆಯ ಕಾಲದ ತಾಂತ್ರಿಕತೆಯನ್ನೇ ಬಳಸಲಾಗುತ್ತಿದೆ. ಜಿಲ್ಲೆಯ 5 ತಾಲೂಕುಗಳಲ್ಲೂ ವಿದ್ಯುತ್ ಲೋಡ್ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ. ಆದರೂ ಪೂರೈಕೆ ವ್ಯವಸ್ಥೆ ಇನ್ನೂ ಮೇಲ್ದರ್ಜೆಗೆ ಏರದಿರುವುದರಿಂದ ಗ್ರಾಹಕರು ವಿದ್ಯುತ್ ಸಂಬAಧಿ ಇನ್ನಿತರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಒಂದೇ ವಿದ್ಯುತ್ ಮಾರ್ಗ ಇರುವಲ್ಲಿ ಇಂಥÀ ಸಮಸ್ಯೆ ಆಗಾಗ್ಗೆ ಎದುರಾಗುತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರ ಸಂಘಟನೆಗಳು, ರೈತ ಸಂಘಟನೆಗಳು, ಸಾಮಾನ್ಯ ವಿದ್ಯುತ್ ಬಳಕೆದಾರರು ವಿದ್ಯುತ್ ಪ್ರಸರಣಾ ವ್ಯವಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಕಾಲ ಕಾಲಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಸಂಬAಧಿಸಿದವರ ಗಮನ ಸೆಳೆಯುತ್ತಾ ಬಂದಿದ್ದರು.
ಜಿಲ್ಲೆಯ ವಿದ್ಯುತ್ ಸಂಬAಧಿ ಸಮಸ್ಯೆಗಳ ಬಗ್ಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಗಮನವನ್ನೂ ತರಲಾಗಿತ್ತು. ಇವರಿಬ್ಬರೂ ಜಿಲ್ಲೆಯವರೇ ಆದ ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ಅವರ ಮೂಲಕ ವಿದ್ಯುತ್ ಜಾಲದ ಉನ್ನತಿಕರಣಕ್ಕಾಗಿಯೇ ಕೊಡಗಿಗೆ ಬರೋಬ್ಬರಿ 226 ಕೋಟಿ ರೂ. ಅನುದಾನ ತಂದಿದ್ದಾರೆ.
ಇದೀಗ ಈ 226 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 120 ಕೋಟಿ ರೂ. ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ 106 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಮೂರು ಸಂಸ್ಥೆಗಳಿಗೆ ಕಾಮಗಾರಿಯ ಹೊಣೆ ನೀಡಲಾಗಿದೆ. ಯಾವುದೇ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡು ಸೆಸ್ಕ್ ಮೇಲ್ವಿಚಾರಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕೊಡಗಿನ ಗ್ರಾಮೀಣ ಭಾಗದಲ್ಲಿ ಇವತ್ತಿಗೂ ವಿದ್ಯುತ್ ಸಮಸ್ಯೆ ಇದೆ. ಮಳೆಗಾಲದಲ್ಲಿ ವಾರಗಟ್ಟಲೆ ವಿದ್ಯುತ್ ಇಲ್ಲದೆ ಪರದಾಡುವಂಥ ಪರಿಸ್ಥಿತಿ ಇಲ್ಲಿ ಸಾಮಾನ್ಯ. ಕೊಡಗಿನಲ್ಲಿ ವಿದ್ಯುತ್‌ಜಾಲ ಮೇಲ್ದರ್ಜೆಗೆ ಏರಿಸಿದರೆ, ಮೊದಲು ಗ್ರಾಮೀಣ ಭಾಗದಲ್ಲಿ ತಡೆರಹಿತ ವಿದ್ಯುತ್ ಸಂಪರ್ಕ ಸಿಗುವಂತಾಗಬೇಕು. ಸೂರ್ಲಬ್ಬಿ ನಾಡಿನಲ್ಲಿ ಮಳೆಗಾಲದಲ್ಲಿ ಇವತ್ತಿಗೂ ವಿದ್ಯುತ್ ಸಮಸ್ಯೆಯಿಂದ ಪರದಾಡುತ್ತಿದ್ದೇವೆ.
ಜಯಂತಿ, ಗೃಹಿಣಿ, ಸೂರ್ಲಬ್ಬಿ ಗ್ರಾಮ.
ತಂತ್ರಜ್ಞಾನವಿದ್ದರೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಮಾರ್ಗಗಳು ಅತ್ಯಂತ ಕಳಪೆಯಾಗಿವೆ. ವೈಜ್ಞಾನಿಕ ಮಾದರಿಯಲ್ಲಿ ವಿದ್ಯುತ್ ಮಾರ್ಗ ನಿರ್ಮಾಣವಾಗಬೇಕು. ರಸ್ತೆ ಬದಿಯಲ್ಲಿ ಕೇಬಲ್ ಮೂಲಕ ವಿದ್ಯುತ್ ಸರಬರಾಜು ಆಗಬೇಕು. ಕಂಬದಲ್ಲಿ ತಂತಿ ಎಳೆಯುವುದು, ಮರಬಿದ್ದು ಕಂಬ ಮುರಿಯುವುದು, ಕೋಟಿಗಟ್ಟಲೆ ಹಣ ವ್ಯಯ ಮಾಡುವುದು.. ಹೀಗೆ ಓಬಿರಾಯನ ಕಾಲದಲ್ಲೇ ವಿದ್ಯುತ್ ನಿಗಮ ಇದೆ.
ಎಚ್.ಎಂ. ಸೋಮಪ್ಪ, ಕಾರ್ಮಿಕ ಮುಖಂಡ, ಕುಂಬೂರು, ಗ್ರಾಮ.
ವಿದ್ಯುತ್ ಜಾಲ ಬಲವರ್ಧನೆಯಿಂದ ಕೊಡಗಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಬಗೆಹರಿಯಬಹುದು. ಹೊಸದಾದ ಕಂಬ ಹಾಗೂ ರಸ್ತೆ ಬದಿ ಸಾಲುಗಳನ್ನು ನೂತನವಾಗಿ ನಿರ್ಮಿಸುತ್ತಿರುವುದರಿಂದ ಅಪಾಯಗಳ ಸಂಖ್ಯೆ ಕಡಿಮೆಯಾಗಿ ಉತ್ತಮ ರೀತಿಯಲ್ಲಿ ವಿದ್ಯುತ್ ಪೂರೈಕೆ ನಡೆಯಲು ಸಹಕಾರಿಯಾಗಿದೆ. ವಿದ್ಯುತ್ ಪರಿವರ್ತಕಗಳ ಸಂಖ್ಯೆ ಹೆಚ್ಚಿಸುತ್ತಿರುವುದರಿಂದ ರೈತರಿಗೆ ಹೆಚ್ಚು ಸಹಾಯವಾಗಲಿದೆ .
ಬಿ.ಬಿ. ಸತ್ಯಭಾಮ, ವಿರಾಜಪೇಟೆ.
ಕೊಡಗಿನಲ್ಲಿ ವೋಲ್ಟೇಜ್ ಸಮಸ್ಯೆ ಸಾಕಷ್ಟು ಸಮಸ್ಯೆಗೆ ಕಾರಣವಾಗಿದ್ದು, ವಿದ್ಯುತ್ ಜಾಲ ಬಲವರ್ಧನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಗುಣಮಟ್ಟದ ವಿದ್ಯುತ್ ಸರಬರಾಜು ಆಗಲಿದೆ. ಮಳೆಗಾಲದಲ್ಲಿ ವಾರಗಟ್ಟಲೆ ಅನುಭವಿಸುವ ಸಮಸ್ಯೆಗೆ ಮುಕ್ತಿ ದೊರೆಯುವ ಸಾಧ್ಯತೆಯಿದೆ. ತೋಟಗಳಲ್ಲಿ ಆಗುವಂಥ ಜೀವಹಾನಿ ತಪ್ಪಲಿದೆ.
ಅಭಿಷೇಕ್, ವಿರಾಜಪೇಟೆ
ಕೊಡಗಿನಲ್ಲಿ 226 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಜಾಲ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದು ನಿರೀಕ್ಷೆಗೂ ಮೀರಿದ ಅನುದಾನ. ಸ್ಥಳೀಯ ಶಾಸಕರ ಹಾಗೂ ಸಚಿವರ ಪ್ರಯತ್ನದಿಂದ ಈ ಅನುದಾನ ಬಿಡುಗಡೆ ಆಗಿದೆ. ಇದರಿಂದ ಪ್ರತಿ ವರ್ಷ ಅನುಭವಿಸುತ್ತಿದ್ದ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಕೊಡಗು ಹೆಚ್ಚು ಮರಗಿಡಗಳಿರುವ ಪ್ರದೇಶ. ಪ್ರ‍್ರತಿ ವರ್ಷ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ವಾರ ಗಟ್ಟಲೆ ವಿದ್ಯುತ್ ಕಡಿತವಾಗುತಿತ್ತು. ಮುಂದೆ ಈ ತೊಂದರೆ ಆಗುವುದಿಲ್ಲ.
ವೀರೇಂದ್ರ ಕುಮಾರ್, ಗ್ರಾಮ ಪಂಚಾಯತ್ ಸದಸ್ಯ, ಹಂಡ್ಲಿ
ಕೊಡಗು ಗುಡ್ಡಗಾಡು ಪ್ರದೇಶ. ಇಲ್ಲಿ ವರ್ಷಂಪ್ರತಿ ಮಳೆಗಾಲದಲ್ಲಿ ಮರಗಳು ಬಿದ್ದು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಎಷ್ಟೇ ಮೇಲ್ದರ್ಜೆಗೆ ಏರಿಸಿದರೂ ಕೂಡ ಮಳೆಗಾಲಕ್ಕೂ ಮುನ್ನ ಲೈನ್ ಕ್ಲಿಯರ್ ಮಾಡಿದರೆ ಉತ್ತಮ. ಇಲ್ಲದೇ ಹೋದರೆ ಎರಡು ಮೂರು ದಿನ ಕತ್ತಲೆಯಲ್ಲೇ ದಿನದೂಡಬೇಕಾದೀತು.
ಕೆ.ಪಿ. ಚೇತನ್, ಗೋಣಿಕೊಪ್ಪಲು
ಕೊಡಗಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದAತೆ ಕಾಡುವುದೇ ವಿದ್ಯುತ್ ಸಮಸ್ಯೆ. ವಿದ್ಯುತ್ ಜಾಲ ಮೇಲ್ದರ್ಜೆಗೆ ಏರಿಸುವುದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಕಡಿಮೆಯಾಗಬಹುದು. ಆಧುನಿಕ ತಂತ್ರಜ್ಞಾನದಿAದ ಅಡಚಣೆಗಳಿಗೆ ಮುಕ್ತಿ ಸಿಗಬಹುದು ಜನ ಸಾಮಾನ್ಯರಿಗೆ ಅನುಕೂಲವಾಗಬಹುದು.
ನೆಯ್ಯಣಿರ ಶಾಂತಿ ಅರ್ಜುನ, ಬೆಟ್ಟಗೇರಿ ಬಕ್ಕ
ಜಿಲ್ಲೆಯಲ್ಲಿ ವಿದ್ಯುತ್ ಜಾಲ ಮೇಲ್ದರ್ಜೆಗೆ ಏರಿಸುವ ಸಂಬAಧ ಡಿಸೆಂಬರ್‌ನಿAದ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈಗ ಮಳೆಯ ಕಾರಣದಿಂದ ಸ್ವಲ್ಪ ನಿಧಾನಗತಿಯಲ್ಲಿ ಕೆಲಸಗಳು ಆಗುತ್ತಿದೆ. ಶೇ. 30ರಷ್ಟು ಕಾಮಗಾರಿ ಮುಗಿದಿದೆ. 10-15 ತಂಡಗಳಲ್ಲಿ ಕೆಲಸ ಮಾಡುವುದರಿಂದ ಈ ಡಿಸೆಂಬರ್ ಒಳಗೆ ಮುಗಿಯುವ ಸಾಧ್ಯತೆ ಇದೆ. ಯೋಜನೆಯ ಕಾಮಗಾರಿ ಮುಗಿದ ನಂತರ ಜಿಲ್ಲೆಯ ವಿದ್ಯುತ್ ಸಮಸ್ಯೆಗಳು ಬಹುತೇಕ ಪರಿಹಾರ ಆಗಲಿದೆ. ನಿರಂತರ ವಿದ್ಯುತ್ ಪೂರೈಕೆ ಇರಲಿದೆ.
ಎಂ. ರಾಮಚಂದ್ರ, ಕಾರ್ಯಪಾಲಕ ಅಭಿಯಂತರ, ಸೆಸ್ಕ್, ಮಡಿಕೇರಿ
ಬಹುಕಾಲದ ಬೇಡಿಕೆಯನ್ನು ಸರ್ಕಾರ ಪರಿಗಣಿಸಿದೆ. ನಮ್ಮ ಬೇಡಿಕೆಗಳಿಗೆ ಮನ್ನಣೆ ಕೊಟ್ಟು ಕೊಡಗಿನವರೇ ಆದ ಕೆ.ಜೆ. ಜಾರ್ಜ್ 226 ಕೋಟಿ ರೂ. ಮಂಜೂರು ಮಾಡಿ ಕೂಡಲೇ ಹಣ ಬಿಡುಗಡೆ ಮಾಡಿದ್ದಾರೆ. ಗುಣಮಟ್ಟದ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜು ಅಭಿವೃದ್ಧಿಪಡಿಸಲು ಮತ್ತು ಬಲಪಡಿಸಲು ಈ ಯೋಜನೆ ಪೂರಕವಾಗಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ