ವಿದ್ಯುತ್ ಖಾಸಗೀಕರಣಕ್ಕೆ ವಿರೋಧ

05 Raibag 1 photo_Web
ವಿದ್ಯುತ್ ಖಾಸಗೀಕರಣಗೊಳಿಸುವ ಕೇಂದ್ರದ ಪ್ರಸ್ತಾವನೆ ವಿರೋಧಿಸಿ ರಾಯಬಾಗ ಕೆಪಿಟಿಸಿಎಲ್ ನೌಕರರ ಸಂಘದ ಸದಸ್ಯರು ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಪಿ.ಎಸ್.ಪಾಟೀಲ, ಸದಾಶಿವ ಕಾಂಬಳೆ, ಎಂ.ಡಿ.ಪಾಟೀಲ, ಎಂ.ಕೆ.ಶೇಗುಣಿಸಿ, ರವಿ ಕೊಣ್ಣೂರ, ಬಸವರಾಜ ಜೋಡಟ್ಟಿ, ಎಸ್.ಎಲ್.ಕೋಳಿ ಇತರರಿದ್ದರು.
Published on

ರಾಯಬಾಗ: ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣಗೊಳಿಸುವ ಕೇಂದ್ರದ ಪ್ರಸ್ತಾವನೆ ವಿರೋಧಿಸಿ ರಾಯಬಾಗ ಕೆಪಿಟಿಸಿಎಲ್ ನೌಕರರ ಸಂಘದ ಸದಸ್ಯರು ಸೋಮವಾರ ಹೆಸ್ಕಾಂ ಕಚೇರಿ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ, ಪ್ರತಿಭಟನೆ ನಡೆಸಿದರು.

ಕೆಪಿಟಿಸಿಎಲ್ ನೌಕರರ ಸಂಘದ ಚಿಕ್ಕೋಡಿ ವೃತ್ತದ ಸಂಘಟನಾ ಕಾರ್ಯದರ್ಶಿ ಎಸ್.ಆರ್.ಶಿಂಧೆ ಮಾತನಾಡಿ, ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಸರಿಯಲ್ಲ. ಈ ಕಾಯ್ದೆ ಕಾರ್ಮಿಕ ವಿರೋಧಿಯಾಗಿದೆ. ಕೇಂದ್ರ ಸರ್ಕಾರ ಪ್ರಸ್ತಾವನೆಯಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಹೆಸ್ಕಾಂ ಎಲ್ಲ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು. ಪಿ.ಎಸ್. ಪಾಟೀಲ, ಸಮಿತಿ ಅಧ್ಯಕ್ಷ ಸದಾಶಿವ ಕಾಂಬಳೆ, ಶಾಖಾಧಿಕಾರಿಗಳಾದ ಎಂ.ಡಿ.ಪಾಟೀಲ, ಎಂ.ಕೆ.ಶೇಗುಣಿಸಿ, ರವಿ ಕೊಣ್ಣೂರ, ಬಸವರಾಜ ಜೋಡಟ್ಟಿ, ಎಸ್.ಎಲ್.ಕೋಳಿ, ದುಂಡಯ್ಯ ಹಿರೇಮಠ, ಎಂ.ಟಿ.ದೊಡಮನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net