

ಕಾರ್ಕಳ: ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಸಮೀಪ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದ್ದು ಅಪಾಯಕಾರಿಯಾಗಿದ್ದ ವಿದ್ಯುತ್ ಕಂಬ ಹಾಗೂ ಸ್ಟೇವಯರ್ ಅನ್ನು ಮೆಸ್ಕಾಂ ಸಿಬ್ಬಂದಿ ತೆರವುಗೊಳಿಸಿದ್ದಾರೆ.ಕಳೆದ ವರ್ಷ ರಾಜ್ಯ ಹೆದ್ದಾರಿ 1ರ ಎಣ್ಣೆಹೊಳೆ ಸೇತುವೆಯಿಂದ ನೆಲ್ಲಿಕಟ್ಟೆ ಚಿಕ್ಕಲ್ಬೆಟ್ಟುವರೆಗೆ ರಸ್ತೆ ವಿಸ್ತರಿಸಿ ಡಾಂಬರು ಕಾಮಗಾರಿ ಮಾಡಲಾಗಿತ್ತು. ರಸ್ತೆ ವಿಸ್ತರಣೆ ಸಂದರ್ಭ ಟ್ರಾನ್ಸ್ಫಾರ್ಮರ್ ಹಾಗೂ ವಿದ್ಯುತ್ ಕಂಬದ ಸ್ಟೇವಯರ್ ಅನ್ನು ಇಲಾಖೆ ತೆರವುಗೊಳಿಸಿರಲಿಲ್ಲ. ಇದು ಅನಾಹುತಕ್ಕೆ ಎಡೆ ಮಾಡಿಕೊಡುವಂತಿತ್ತು. ಜನರು ಹಲವು ಬಾರಿ ಮನವಿ ಮಾಡಿದರೂ ತೆರವುಗೊಳಿಸಿರಲಿಲ್ಲ. ಈ ಬಗ್ಗೆ ಜೂನ್ 16ರಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು. ಕೂಡಲೇ ಎಚ್ಚೆತ್ತ ಮೆಸ್ಕಾಂ ಇಲಾಖೆ ಅಧಿಕಾರಿಗಳು ರಸ್ತೆ ಬದಿಯಲ್ಲಿದ್ದ ಕಂಬ ಹಾಗೂ ಸ್ಟೇವಯರ್ಗಳನ್ನು ತೆರವುಗೊಳಿಸಿ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ.