ತುರ್ತು ಕಾರ್ಯನಿರ್ವಹಣೆ: ಮಾ.8ರಂದು ಹಲವೆಡೆ ವಿದ್ಯುತ್ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ಮಂಡ್ಯ: ತುರ್ತು ಹಾಗೂ ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಮಾ.8ರಂದು ನಗರ ಸೇರಿದಂತೆ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ತುರ್ತು ಕಾರ್ಯನಿರ್ವಹಣೆ ನಡೆಯಲಿರುವ ಕಾರಣ ಸುಭಾಷ್‌ನಗರ, ಅಶೋಕನಗರ, ವಿ.ವಿ ರಸ್ತೆ, ಹೊಸಹಳ್ಳಿ, ವಿನಾಯಕ ಬಡಾವಣೆ, ನೂರಡಿ ರಸ್ತೆ, ನೆಹರುನಗರ, ಹೊಸಹಳ್ಳಿ, ದ್ವಾರಕನಗರ, ಗಾಂಧಿನಗರ, ಎನ್‌ಜಿಒ ಲೇಔಟ್, ಶ್ರೀರಾಮನಗರ, ಕಾವೇರಿ ನಗರ 1 ಮತ್ತು 2ನೇ ಹಂತ, ಚಂದ್ರದರ್ಶನ, ಚಾಮುಂಡೇಶ್ವರಿ ನಗರ, ಅನ್ನಪೂರ್ಣೇಶ್ವರಿ ನಗರ, ಶಂಕರನಗರ, ಇಂಡುವಾಳು, ಕಿರಗಂದೂರು, ಕಲ್ಲಹಳ್ಳಿ. ಕ್ಯಾತುಂಗೆರೆ ಹಾಗೂ ಗ್ರಾಮಾಂತರ ಪ್ರದೇಶವಾದ ಕಾರಸವಾಡಿ, ಮಂಗಲ, ಹನಿಯಂಬಾಡಿ, ಚೀರನಹಳ್ಳಿ, ಹೆಬ್ಬಕವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ.ಹುಲಿಕೆರೆ, ಬಿ.ಹುಲಿಕೆರೆ ಮತ್ತು ಐ.ಪಿ ಮಾರ್ಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ಅಂತೆಯೇ ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ತಗ್ಗಹಳ್ಳಿ, ಕೋಲಕಾರನದೊಡ್ಡಿ, ಹೆಮ್ಮಿಗೆ, ಸೂನಗನಹಳ್ಳಿ, ಪುರ, ಲೋಕಸರ, ಹಲುವಾಡಿ, ಕಮ್ನಾಯಕನಹಳ್ಳಿ, ಟಿ. ಮಲ್ಲಿಗೆರೆ, ಕಬ್ಬನಹಳ್ಳಿ, ತಿಮ್ಮನಹೊಸೂರು, ಬಿ.ಹೊಸೂರು , ಗೋಪನಹಳ್ಳಿ ಯಡಗನಹಳ್ಳಿ, ಮಾದರಹಳ್ಳಿ, ಕೆರಗೋಡು, ದೊಡ್ಡಗರುಡನಹಳ್ಳಿ, ಬಿಳಿದೇಗಲು, ಮುದಗಂದೂರು, ಮಾರಗೌಡನಹಳ್ಳಿ, ಬಿ.ಹೊಸೂರು, ಹಂಪಾಪುರ, ಕಲ್ಮಂಟಿದೊಡ್ಡಿ, ಸೌದೇನಹಳ್ಳಿ, ಬೆಟ್ಟಹಳ್ಳಿ, ಬೀಚನಹಳ್ಳಿ, ಪುರದಕೊಪ್ಪಲು, ಎಂ.ಹೊನ್ನೇನಹಳ್ಳಿ , ಬಿದರಕಟ್ಟೆ, ಬೆನ್ನಹಟ್ಟಿ, ಮನುಗನಹಳ್ಳಿ, ವಿ.ಸಿ.ಫಾರ್ಮ್, ಶಿವಳ್ಳಿ, ದುದ್ದ, ಬಿ.ಹಟ್ನ, ಬೇವುಕಲ್ಲು, ಹುಲಿಕೆರೆ, ಚಂದಗಾಲು, ಹುಲ್ಲೇನಹಳ್ಳಿ, ಹೊಳಲು ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net