ತ್ರೈಮಾಸಿಕ ಕಾರ್ಯನಿರ್ವಹಣೆ: ಫೆ.4ರಂದು ಹಲವೆಡೆ ವಿದ್ಯುತ್ ವ್ಯತ್ಯಯ

Power cutt
Published on

ಮಂಡ್ಯ: ತ್ರೈಮಾಸಿಕ ಕಾರ್ಯನಿರ್ವಹಣೆ ಹಿನ್ನೆಲೆಯಲ್ಲಿ ಫೆ.4ರಂದು ನಗರ ಸೇರಿದಂತೆ ತಾಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ನಗರ ಪ್ರದೇಶವಾದ ಗುತ್ತಲು, ಫ್ಯಾಕ್ಟರಿ ವೃತ್ತ, ಕೈಗಾರಿಕೆ ಬಡಾವಣೆ, ಎಂ.ಸಿ.ರಸ್ತೆ, ತಾವರೆಗೆರೆ, ನೆಹರುನಗರ, ಉದಯಗಿರಿ, ಸಾದತ್ ಮೊಹಲ್ಲಾ, ಚನ್ನಯ್ಯ ಬಡಾವಣೆ, ಸಿದ್ದಾರ್ಥ ಬಡಾವಣೆ, ಬೆಂಗಳೂರು ಮುಖ್ಯರಸ್ತೆಯ ಹೆಬ್ಬಾಳ, ಗ್ರಾಮಾಂತರ ಪ್ರದೇಶವಾದ ಶ್ರೀನಿವಾಸಪುರ ಗೇಟ್, ಹಳೇಬೂದನೂರು, ಹೊಸಬೂದನೂರು, ಭೂತನ ಹೊಸೂರು, ಚನ್ನಪ್ಪನದೊಡ್ಡಿ, ಅಂಬರಹಳ್ಳಿ, ತೂಬಿನಕೆರೆ ವಿದ್ಯುತ್ ವಿತರಣಾ ಕೇಂದ್ರದ ಕೈಗಾರಿಕೆ ಬಡಾವಣೆ, ಉರಮಾರಕಸಲಗೆರೆ, ಯಲಿಯೂರು, ಕಾಳೇನಹಳ್ಳಿ, ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಸುಂಡಹಳಿ, ಪೀಹಳ್ಳಿ, ಕೊಡಿಯಾಲ, ಆಲಗೂಡು, ಗ್ರಾಮಾಂತರ ಪ್ರದೇಶಗಳಾದ ಕಾರಸವಾಡಿ, ಮಂಗಲ, ಹನಿಯಂಬಾಡಿ, ಚೀರನಹಳ್ಳಿ, ಹೆಬ್ಬಕವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ.ಹುಲಿಕೆರೆ, ಬಿ.ಹುಲಿಕೆರೆ, ತುಂಬಕೆರೆ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮಾಂತರ ಪ್ರದೇಶವಾದ ಹೊಡಾಘಟ್ಟ, ಕೀಲಾರ, ಹನಕೆರೆ, ಆಲಕೆರೆ, ನಲ್ಲಹಳ್ಳಿ, ಕಚ್ಚಿಗೆರೆ, ಹೊನಗಾನಹಳ್ಳಿಮಠ, ತುಂಬಕೆರೆ, ಚಾಮಲಾಪುರ, ಉಮ್ಮಡಹಳ್ಳಿ, ಬಸವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜು ಇರುವುವುದಿಲ್ಲ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net