ಅ.3ರ ವರೆಗೆ ವಿದ್ಯುತ್ ವ್ಯತ್ಯಯ

images
Published on

ಚಿತ್ರದುರ್ಗ: ಭರಮಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಪರಿವರ್ತಕಗಳ ಅಳವಡಿಕೆ ಕಾರ‌್ಯದ ಹಿನ್ನೆಲೆಯಲ್ಲಿ ಅಕ್ಟೋಬರ್ 3ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಹೆಗ್ಗರೆ, ಎಮ್ಮೆಹಟ್ಟಿ, ನಲ್ಲಿಕಟ್ಟೆ, ಹೆಗಡೆಹಾಳ್, ವಿಜಾಪುರ, ಶಿವನಕೆರೆ, ನಂದಿಹಳ್ಳಿ, ಬಹದ್ದೂರ್‌ಘಟ್ಟ, ಪಾಮರಹಳ್ಳಿ, ಕೋಡಿಹಳ್ಳಿ, ಹರಳಿಕಟ್ಟೆ ಮತ್ತಿತರ ಪ್ರದೇಶಗಳಲ್ಲಿ ಹಗಲು ವೇಳೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಲಿದೆ ಎಂದು ಬೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ‌್ಯನಿರ್ವಾಹಕ ಇಂಜಿನಿಯರ್ ಜಯಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net