ವಿದ್ಯುತ್ ಪೂರೈಕೆ ಸ್ಥಗಿತ ನಾಳೆ

Published on

ಬೆಟ್ಟದಪುರ: ಇಲ್ಲಿನ ಸೆಸ್ಕ್ ವ್ಯಾಪ್ತಿಯ ಬೆಟ್ಟದಪುರ, ರಾವಂದೂರು ಮತ್ತು ಕಿತ್ತೂರು ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನ.19ರ ಮಂಗಳವಾರ ಮೂರನೇ ತ್ರೈಮಾಸಿಕ ನಿರ್ವಹಣೆ ಇರುವುದರಿಂದ ಬೆಟ್ಟದಪುರ, ಹರದೂರು, ಚಿಕ್ಕನೇರಳೆ, ಕಿತ್ತೂರು, ಬೆಟ್ಟದತುಂಗಾ, ಅತ್ತೀಗೋಡು, ಭುವನಹಳ್ಳಿ, ಕೋಮಲಾಪುರ, ಎಚ್.ಎಚ್ ಬಾಗಿಲು, ಆರ್.ತುಂಗಾ, ರಾವಂದೂರು, ಹಂಡಿತವಳ್ಳಿ, ಎನ್.ಶೆಟ್ಟಹಳ್ಳಿ, ಮಾಕೋಡು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಎಇಇ ಕೆ.ಕೆ ಲಕ್ಷ್ಮೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net