

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಉಪವಿಭಾಗ ವ್ಯಾಪ್ತಿಯ 110/11 ಕೆ.ವಿ ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈ ಮಾಸಿಕ ಕಾರ್ಯ ಕೈಗೊಳ್ಳುವುದರಿಂದ ಜು. 10ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಅಳ್ನಾವರ ಪಟ್ಟಣ, ಬೆಣಚಿ, ಡೋರಿ, ಗುಡೆಬೈಲ್, ದೊಪೆನಹಟ್ಟಿ, ಹಳ್ಳಿಗೇರಿ, ಕಡಬಗಟ್ಟಿ, ಹಿಂಡಸಗೇರಿ, ಬೊಡಳ್ಳಿ, ಗುಂಡಳ್ಳಿ, ಬಾಲಗೆರಿ, ಬಾಳಗುಂದ, ಚುಂಚವಾಡ, ಲಿಂಗನಮಠ,ಪಾಲಗೆರಾ, ಅರವಟಗಿ, ಅಂಬೊಲಿ, ಕುಂಬಾರಕೊಪ್ಪ, ಬಸವೇಶ್ವರನಗರ, ಹೊನ್ನಾಪುರ, ಶಿವನಗರ, ಕಂಬಾರಗಣವಿ ಹಾಗೂ ಸುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.