

ಬಾಗಲಕೋಟೆ : 110 ಕೆ.ವಿ ಕೆರೂರ ವಿವಿ ಕೇಂದ್ರದಿಂದ ಸರಬರಾಜಾಗುವ 11 ಕೆವಿ ಹೆಚ್.ಟಿ. ಮಾರ್ಗಗಳ ವ್ಯಾಪ್ತಿಯಲ್ಲಿ ವಾಹಕಗಳ ಮರು ಜೋಡಣೆ ಕಾಮಗಾರಿ ಕೈಗೊಳ್ಳುವ ಪ್ರಯುಕ್ತ ಸೆ. 28ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಬೆಳಗಂಟಿ, ಕೆರೂರು, ಉಗಲವಾಟ, ಹಳಗೇರಿ, ಮುಸ್ತಿಮುಷ್ಟಿಗೇರಿ ಮಾರ್ಗಗಳ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.