ವಿದ್ಯುತ್​ ವ್ಯತ್ಯಯ ನಾಳೆ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಲಕಮನಹಳ್ಳಿ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಜೂ. 8ರಂದು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮದಿಂದ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಟೋಲ್​ನಾಕಾ, ಮಾಳಮಡ್ಡಿ, ನಗರಕರ ಕಾಲನಿ, ಗಾಂಧಿನಗರ, ಕಲಘಟಗಿ ರಸ್ತೆ, ರಾಜೀವಗಾಂಧಿ ನಗರ, ಸರಸ್ವತಿನಗರ, ತೇಜಸ್ವಿನಗರ, ಗಿರಿನಗರ, ಗುರುದೇವ ನಗರ, ವಿದ್ಯಾಗಿರಿ, ರಜತಗಿರಿ, ವೈ.ಎಸ್​. ಕಾಲನಿ, ಲಕ್ಕಮ್ಮನಹಳ್ಳಿ, ಗೋಪಾಲಪುರ, ಸ್ಟೇಶನ್​ ರಸ್ತೆ, ನುಗ್ಗಿಕೇರಿ, ನವಲೂರ, ಜನ್ನತನಗರ, ಹೊಸಯಲ್ಲಾಪುರ, ದುಂಡಿ ಓಣಿ, ಯಲಿಗಾರ ಓಣಿ, ಭೂಸಪ್ಪ ಚೌಕ್​, ಶಿವಾನಂದನಗರ, ರಾಮನಗರ, ಲೈನ್​ ಬಜಾರ್​, ದರೋಗಾ ಓಣಿ, ತುಪ್ಪದ ಓಣಿ, ಸೌದಾಗರ ಗಲ್ಲಿ, ಟಿಕಾರೆ ರಸ್ತೆ, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ನಿಗದಿ, ದೇವರಹುಬ್ಬಳ್ಳಿ, ಕಲಕೇರಿ, ಹಳ್ಳಿಗೇರಿ, ಮನಸೂರು ಮತ್ತು ಮನಗುಂಡಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳು, ವಿಠ್ಠಲ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net