

ಮಂಡಕಳ್ಳಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಕೆಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸೆ.7 ರಂದು ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಮಂಡಕಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಜ್ಞಾನಗಂಗಾ ಬಡಾವಣೆ, ಶ್ರೀನಗರ, ಬಿ.ಟಿ.ಎ. ಬಡಾವಣೆ, ಮಹಾಲಕ್ಷ್ಮಿ ಬಡಾವಣೆ, ವೆಂಕಟಾದ್ರಿ ಬಡಾವಣೆ, ಸರೋಜ ಬಡಾವಣೆ, ಸಿದ್ದಪ್ಪ ಬಡಾವಣೆ, ವಸಂತ ಬಡಾವಣೆ, ಕೆಎಸ್‌ಆರ್‌ಟಿಸಿ ಬಡಾವಣೆ, ವಿಜಯ ಕುಮಾರ್ ಬಡಾವಣೆ, ಸ್ಕಿಲ್‌ಟೆಕ್ ಬಡಾವಣೆ, ಸಿದ್ದಲಿಂಗೇಶ್ವರ ಬಡಾವಣೆ, ಎಂಸಿಆರ್‌ಟಿಸಿ ಬಡಾವಣೆ, ಐಶ್ವರ್ಯ ಬಡಾವಣೆ, ಶಿವಾನಂದ ಭಾರತಿ ಬಡಾವಣೆ, ಬೆಮೆಲ್ ಬಡಾವಣೆ, ಶಾರದಾ ಬಡಾವಣೆ, ಗುರುಕುಲ ಬಡಾವಣೆ, ನೆಸ್ಲೆ ಬಡಾವಣೆ, ಟೀಚರಸ್ ಲೇಔಟ್, ಎಂ.ಕೆ.ಮಹೇಶ್ ಬಡಾವಣೆ, ಭವಾನಿ ಬಡಾವಣೆ, ಆರ್.ಕೆ. ಬಡಾವಣೆ, ತಿಬ್ಬಾದೇವಿ ಫಾರಂ, ಅವಲಕ್ಕಿ ಫ್ಯಾಕ್ಟರಿ, ಬಿ.ಟಿ.ಎ. ಬಡಾವಣೆ, ಡಿ ಜೋನ್ ಮುಡಾ ಬಡಾವಣೆ, ಕೊಪ್ಪಲೂರು ಗ್ರಾಮ, ಮಂಡಕಳ್ಳಿ ಗ್ರಾಮ, ದೃಷ್ಟಿ ಎನ್‌ಕ್ಲೇವ್, ವಿನಾಯಕ ಎನ್‌ಕ್ಲೇವ್, ಪುಷ್ಪಕುಮಾರಿ ಬಡಾವಣೆ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸೆ.8 ರಂದು ಬೆಳಗ್ಗೆ 10 ರಿಂದ ಸಂಜೆ 5.30ರ ವರೆಗೆ ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಇನಾಂ ಉತ್ತನಹಳ್ಳಿ, ಎಂ.ಸಿ.ಹುಂಡಿ, ಕೀಳನಪುರ, ಸಿದ್ದರಾಮನಹುಂಡಿ, ಮೇಗಳಾಪುರ, ಮಾಧವಗೆರೆ, ಗುರುಕಾರಪುರ, ದುದ್ದಗೆರೆ, ಮಹದೇವಿ ಕಾಲನಿ, ಲಕ್ಷ್ಮಿಪುರ, ಪಿ.ಜಿ ಹುಂಡಿ, ಚಟ್ಟನಹಳ್ಳಿ, ಚಟ್ಟನಹಳ್ಳಿ ಪಾಳ್ಯ, ಹೊಸಹಳ್ಳಿ, ರಂಗನಾಥಪುರ, ಶ್ರೀನಿವಾಸಪುರ, ಯಡಕೊಳ, ಕಡವೆ ಕಟ್ಟೆಹುಂಡಿ, ಅಂಚೆಹುಂಡಿ, ದೇವೇಗೌಡನಹುಂಡಿ, ಮುದ್ದೇಗೌಡನಹುಂಡಿ, ಕುಪ್ಪೆಗಾಲ, ವರಕೋಡು ಪೇಪರ್ ಮಿಲ್, ಎಸ್.ಆರ್.ಇಂಡಸ್ಟ್ರೀಸ್, ರಾಜಶ್ರೀ ಇಂಡಸ್ಟ್ರೀಸ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.