

ಮೈಸೂರು: ಹೂಟಗಳ್ಳಿ-ಬೋಗಾದಿ ಮಾರ್ಗದ ಟಿಸಿ ಬದಲಾವಣೆ ಹಿನ್ನೆಲೆಯಲ್ಲಿ ಏ.19 ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಬೋಗಾದಿ ಸುತ್ತಮುತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೋಗಾದಿ, ಹಳ್ಳಿಬೋಗಾದಿ, ಬೋಗಾದಿ ರಿಂಗ್ ರಸ್ತೆ, ಜವರೇಗೌಡ ಬಡಾವಣೆ, ಬ್ರೀಗೇಡ್ ಅಪಾರ್ಟ್‌ಮೆಂಟ್, ಮರಟಿಕ್ಯಾತನ ಹಳ್ಳಿ, ಎಸ್‌ಬಿಎಂ ಬಡಾವಣೆ, ಬೋಗಾದಿ ಪಟ್ಟಣ ಪಂಚಾಯಿತಿ, ಸುವರ್ಣ ನಗರ, ವಿಜಯನಗರ 3ನೇ ಹಂತ, ಬೋಗಾದಿ 2ನೇ ಹಂತ, (ಉತ್ತರ-ದಕ್ಷಿಣ) ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.