ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

POWER CUT
Published on

ಹಲಗೂರು: ಸಮೀಪದ ಗುಂಡಾಪುರ ಗೇಟ್ ಮತ್ತು ಯತ್ತಂಬಾಡಿ ಬಳಿ ಇರುವ 66/11ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುವುದರಿಂದ ಫೆ.13ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಹಲಗೂರು ಸೇರಿದಂತೆ ಗುಂಡಾಪುರ, ದಳವಾಯಿ ಕೋಡಿಹಳ್ಳಿ, ಚನ್ನಪಟ್ಟಣ ರಸ್ತೆ, ಮದ್ದೂರು ರಸ್ತೆಯಲ್ಲಿ ಬರುವ ಗ್ರಾಮಗಳಿಗೆ ಹಾಗೂ ಯತ್ತಂಬಾಡಿ, ಟಿ ಕೆ.ಹಳ್ಳಿ, ನಿಟ್ಟೂರು, ಅಂಕನಹಳ್ಳಿ, ಸಾಗ್ಯ, ಸಾವಂದಿಪುರ, ಎನ್.ಹಲಸಹಳ್ಳಿ, ಕುಂತೂರು ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮುತ್ತತ್ತಿ ರಸ್ತೆಯಲ್ಲಿ ಬರುವ ಗ್ರಾಮಗಳಿಗೆ ಎಂದಿನಂತೆ ವಿದ್ಯುತ್ ಸಂಪರ್ಕ ಇರಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕಿರಿಯ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net