ಮಂಗಳೂರು: 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ನಾಗುರಿ ಮತ್ತು ಪಂಪ್ ವೆಲ್ ಫೀಡರ್ ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ವಿದ್ಯುತ್ ಕಂಬ ಸ್ಥಳಾಂತರ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಸೆ.27ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮರೋಳಿ, ಪಡೀಲ್, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್‌ವೆಲ್, ಕಪಿತಾನಿಯೊ, ರೆಡ್‌ಬಿಲ್ಡಿಂಗ್, ರೈಲ್ವೇಸ್ಟೇಷನ್, ಕ್ವಾಡ್ ಸೆಂಟರ್, ಇಂಡಿಯಾನ ಹಾಸ್ಪಿಟಲ್, ನಿಟ್ಟೆ ಎಜುಕೇಷನ್ ಸೆಂಟರ್, ಮಹಾವೀರ ಸರ್ಕಲ್, ಪಂಪ್‌ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ. 33/11ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಶಿವಭಾಗ್ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಶಿವಭಾಗ್ 1ರಿಂದ 5ನೇ ಕ್ರಾಸ್‌ವರೆಗೆ, ಇ.ಎಸ್.ಐ, ಗೀತಾಂಜಲಿ, ಲೋವರ್, ತಾರೇತೋಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.