ಮೈಸೂರಿನ ಹಲವೆಡೆ ಮೇ 26 ರಂದು ವಿದ್ಯುತ್ ನಿಲುಗಡೆ

power
Published on

ಮೈಸೂರು: ನಗರದ ಹಲವು ಕಡೆಗಳಲ್ಲಿ ಮೇ 26 ರಂದು ಬೆಳಗ್ಗೆ 9.30 ರಿಂದ ಸಂಜೆ 6ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿ.ವಿ. ಮೊಹಲ್ಲಾ ವಿಭಾಗ ವ್ಯಾಪ್ತಿಯ ಹೂಟಗಳ್ಳಿ ಸ್ವೀಕರಣಾ ಕೇಂದ್ರ, ಹೆಬ್ಬಾಳ್ ವಿದ್ಯುತ್ ವಿತರಣಾಕೇಂದ್ರ, ಮೇಟಗಳ್ಳಿವಿದ್ಯುತ್ ವಿತರಣಾ ಕೇಂದ್ರ ಹಾಗೂ ಹೆಬ್ಬಾಳ್ ಕೈಗಾರಿಕಾ ಪ್ರದೇಶ ವಿದ್ಯುತ್ ವಿತರಣಾ ಕೇಂದ್ರದಲ್ಲಿ 1ನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ.
ಹೂಟಗಳ್ಳಿ ಸ್ವೀಕರಣಾ ಕೇಂದ್ರ ವ್ಯಾಪ್ತಿಯ ಆಟೋಮೋಟಿವ್ ಆಕ್ಸಿಲ್, ರಾಣೆ ಮದ್ರಾಸ್ ಪಕ್ಕದ ರಸ್ತೆ, ಎಚ್.ಟಿ. ರೆಕೆಟ್‌ಬೆನ್‌ಸರ್, ಕೂರ್ಗಳ್ಳಿ ಕೈಗಾರಿಕ ಪ್ರದೇಶ, ಹೂಟಗಳ್ಳಿ ಕೈಗಾರಿಕ ಪ್ರದೇಶ, ಹಳೇ ಲೂನರ್ಸ್, ತಿಯೋರೆಮ್ಸ್, ಸ್ಪೆಕ್ಟ್ರಾ ಪೈಪ್ಸ್, ವರ್ಷ ಕೇಬಲ್, ಎಲ್ಟಿ, ವಿಪ್ರೋ ಲೈಟ್ಸ್, ಶ್ರೀರಾಮ್ ಇಂಜಿನಿಯರ್ಸ್, ರಜತ್ ಬ್ಯಾಟರಿ, ಆರ್.ಪಿ.ಜಿ ಕೇಬಲ್, ಜಿಮ್‌ಕೋ, ಸ್ಲೈ, ಎಂಪ್ರೋಕಾಟಕ್ರಿಟ್, ಡ್ಯಾಮ್‌ಡನ್ ಆಪಾರ್ಟ್ಮೆಂಟ್, ಹಿನಕಲ್ ಆಶ್ರಯ ಯೋಜನೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಬ್ಬಾಳ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಹೆಬ್ಬಾಳ್, ಕುಂಬಾರಕೊಪ್ಪಲು, ಟೋಲ್‌ಗೇಟ್, ವಾಣಿವಿಲಾಸ ಬಡಾವಣೆ, ಮಹದೇಶ್ವರ ಬಡಾವಣೆ, ಸುಭಾಷ್ ನಗರ, ಸೂರ್ಯ ಬೇಕರಿ, ವಿಜಯನಗರ, ರೈಲ್ವೆ ಬಡಾವಣೆ, ಅಭಿಷೇಕ್ ವೃತ್ತ, ಮಾದೇಗೌಡ ವೃತ್ತ, ಎಂ.ಜಿ.ಕೊಪ್ಪಲು, ಹೊರ ವರ್ತುಲ ರಸ್ತೆ, ಹಂಪಿ ವೃತ್ತ, ಸಂಗಮ್ ವೃತ್ತ, ಆರ್ಕಿಯೋಲಜಿ ಕಚೇರಿ, ಕೆಐಎಡಿಬಿ ಕೈಗಾರಿಕಾ ಬಡಾವಣೆ, ಎಲ್ಟಿ ಕಾರ್ಖಾನೆ, ರಾಣೆ ಮದ್ರಾಸ್, ಜೆ.ಕೆ. ಟಯರ್ಸ್, ಮೈಸೂರು ಸ್ಟೀಲ್ಸ್, ಇಎಚ್‌ಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ಮೇಟಗಳ್ಳಿವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಹೆಬ್ಬಾಳ್ ಕೈಗಾರಿಕ ಪ್ರದೇಶ, ಮೇಟಗಳ್ಳಿ, ಬೃಂದಾವನ ಬಡಾವಣೆ, ಲೋಕನಾಯಕ ನಗರ, ಜಯದೇವ ನಗರ, ಬಿ.ಎಂ.ಶ್ರೀನಗರ, ಹೆಬ್ಬಾಳ್ ಹೊರ ವರ್ತುಲ ರಸ್ತೆ, ಎಚ್‌ಪಿಸಿಎಲ್ ಪ್ಲಾಂಟ್ ಸುತ್ತಮುತ್ತ, ಹೆಬ್ಬಾಳ್ 1ನೇ, 2ನೇ ಹಾಗೂ 3ನೇ ಹಂತ, ಸುಬ್ರಹ್ಮಣ್ಯನಗರ, ಬಸವನಗುಡಿ, ಎಸ್‌ಬಿಎಂ ಬ್ಯಾಂಕ್, ಹೆಬ್ಬಾಳ್ ಕಾಲೋನಿ, ಹೆಬ್ಬಾಳ್ ಮುಖ್ಯರಸ್ತೆ, ಲಕ್ಷ್ಮೀಕಾಂತನಗರ, ಸಂಕ್ರಾಂತಿ ವೃತ್ತ, ಗೋಲ್ಡನ್ ಬೇಕರಿ, ಕೆಐಎಡಿಬಿ ಬಡಾವಣೆ, ಮಯೂರ ವೃತ್ತ, ಕಾವೇರಿ ವೃತ್ತ, ಮಿಲಿಟರಿ ಕ್ವಾಟ್ರಸ್, ಆರ್‌ಬಿಐ, ವಿಕ್ರಾಂತ್ ಮೇನ್ ಪ್ಲಾಂಟ್, ಶಿವಮೊಗ್ಗ ಸ್ಟೀಲ್ಸ್, ಬೆಳಗೊಳ ಕೈಗಾರಿಕ ಪ್ರದೇಶ, ಕೆಆರ್‌ಎಸ್ ರಸ್ತೆ, ಭೈರವೇಶ್ವರನಗರ, ಬಸವೇಶ್ವರನಗರ, ಮೇಟಗಳ್ಳಿ ಕೈಗಾರಿಕ ಪ್ರದೇಶ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.

ಹೆಬ್ಬಾಳ್ ಕೈಗಾರಿಕಾ ಪ್ರದೇಶ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕೂರ್ಗಳ್ಳಿ ಕೈಗಾರಿಕ ಪ್ರದೇಶ, ಎಕ್ಸೆಲ್ ಪಬ್ಲಿಕ್ ಶಾಲೆ, ವಿನ್ಯಾಸ್, ಕೂರ್ಗಳ್ಳಿ ಕೆರೆ, ಗೋಪಾಲನ್ ಕಾಂಪೌಂಡ್, ವಿಪ್ರೋ, ಮೆರಿಟಾರ್, ಪಟ್ಟಾಬಿ ಎಂಟರ್‌ಪ್ರೈಸಸ್, ಮಿಲೆನಿಯಮ್, ಎಲ್ಟಿ, ಮಾರ್ಕ್ ಬ್ಯಾಟರಿಸ್ ರಸ್ತೆ, ಚಾಮುಂಡಿ ಸಿಲ್ಕ್ಸ್, ಬಿಇಎಮ್‌ಎಲ್, ಆಟೋಮೋಟಿವ್ ಆಕ್ಸೆಲ್ಸ್, ಇನ್ಫೋಸಿಸ್, ಜೆ.ಕೆ.ಟಯರ್ ಮೇನ್ ಮತ್ತು ರೇಡಿಯಲ್ ಪ್ಲಾಂಟ್, ಸೈಡರ್‌ಫೋರ್ಜ್, ಶಿವಮೊಗ್ಗ ಸ್ಟೀಲ್ಸ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net