

ಕೊಳ್ಳೇಗಾಲ: ಕೊಳ್ಳೇಗಾಲದ 66/11 ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮೇ 19ರಂದು ಬೆಳಗ್ಗೆ 10 ರಿಂದ 6 ಗಂಟೆವರೆಗೆ ತ್ರೈಮಾಸಿಕ ಕಾರ್ಯ ಹಮ್ಮಿ ಕೊಂಡಿರುವುದರಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಉತ್ತಂಬಳ್ಳಿ, ಹರಳೆ ಐ.ಪಿ, ವಾಟರ್ ಸಪ್ಲೈ, ಕಟ್ನವಾಡಿ ಐ.ಪಿ, ಕುಣಗಳ್ಳಿ ಐ.ಪಿ, ಬಸವೇಶ್ವರ ನಗರ, ಮುಡಿಗುಂಡ, ಮುಳ್ಳೂರು ಐ.ಪಿ, ಶುಗರ್ ಫ್ಯಾಕ್ಟರಿ ಐ.ಪಿ, ಟೌನ್-1, ಟೌನ್-2 ಫೀಡರ್‌ಗಳಿಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಇದರಿಂದ ಪಟ್ಟಣದ ಹೊಸ ಅಣಗಳ್ಳಿ, ಆನಂದಜ್ಯೋತಿ ಕಾಲನಿ, ಬಸ್ತೀಪುರ, ಭೀಮಾನಗರ, ಅಂಬೇಡ್ಕರ್ ರಸ್ತೆ, ರಾಜ್‌ಕುಮಾರ್ ರಸ್ತೆ, ದೇವಾಂಗಪೇಟೆ, ಸಿದ್ದಯ್ಯನಪುರ, ಆದರ್ಶನಗರ, ಕೊಳ್ಳೇಗಾಲ ಮೋಳೆ ಮತ್ತು ತಾಲೂಕಿನ ಹರಳೆ, ಕುಣಗಳ್ಳಿ, ಉತ್ತಂಬಳ್ಳಿ, ತೇರಂಬಳ್ಳಿ, ಗೊಬ್ಬಳಿಪುರ, ಬೆಂಡರಹಳ್ಳಿ, ಬೂದಿತಿಟ್ಟು, ಸೂರಪುರ, ಮುಳ್ಳೂರು, ಹಳೇಹಂಪಾಪುರ, ಹೊಸಹಂಪಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಚೆಸ್ಕಾಂ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.