ಕೊಳ್ಳೇಗಾಲ ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ

power prob
Published on

ಕೊಳ್ಳೇಗಾಲ: 66/11 ಕೆ.ವಿ. ಕುಂತೂರು ವಿ.ವಿ.ವಿದ್ಯುತ್ ಸ್ವೀಕರಣಾ ಕೇಂದ್ರ ಚಿಲಕವಾಡಿಯಲ್ಲಿ ತ್ರೈಮಾಸಿಕ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮಾ.22ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

66/11 ಕೆ.ವಿ. ವಿ.ವಿ.ಕೇಂದ್ರ ಕುಂತೂರಿನಿಂದ ಹೊರ ಹೊಮ್ಮುವ 11 ಕೆ.ವಿ.ಫೀಡರ್‌ಗಳಾದ ಟಗರಪುರ ಎನ್.ಜೆ.ವೈ, ಕೆಸ್ತೂರು ಎನ್.ಜೆ.ವೈ, ಕಲಿಯೂರು ಎನ್.ಜೆ.ವೈ, ತೇರಂಬಳ್ಳಿ ಐ.ಪಿ, ಹೊಸಮಾಲಂಗಿ ಮೆಲ್ಲಹಳ್ಳಿ ಐ.ಪಿ, ಬೆಟ್ಟದ ಹೊಸೂರು ಐ.ಪಿ, ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ ಕುಂತೂರು, ಚಿಲಕವಾಡಿ, ಟಗರಪುರ, ಆಲಹಳ್ಳಿ, ಮಲ್ಲಳ್ಳಿಮಾಳ, ಕಜ್ಜಿಹುಂಡಿ, ಹೊಸಮಾಲಂಗಿ, ಸಿಲ್ಕಲ್ ಪುರ, ಕುಂತೂರು ಮೋಳೆ, ಎಡಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮಾ.22 ರಂದು ಬೆಳಗ್ಗೆ 10 ರಿಂದ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಎಇಇ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net