

ಹಾನಗಲ್ಲ: 110, 33, 11 ಕೆ.ವಿ. ಹಾನಗಲ್ಲ ವಿದ್ಯುತ್ ವಿತರಣೆ ಕೇಂದ್ರದಿಂದ ಹೊರಡುವ ಎಫ್-4 ಹಾನಗಲ್ಲ ಪಟ್ಟಣದ ಮಾರ್ಗದಲ್ಲಿ ಫೆ. 22 ಮತ್ತು 24ರಂದು ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಹೆದ್ದಾರಿ ಕಾಮಗಾರಿಯ ನಿಮಿತ್ತ ವಿದ್ಯುತ್ ವ್ಯತ್ಯಯವಾಗಲಿದೆ. ಪಟ್ಟಣದಲ್ಲಿನ ಎಲ್ಲ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಎಇಇ ಎಸ್. ಆನಂದ ತಿಳಿಸಿದ್ದಾರೆ.